ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ

Published : Jun 17, 2025, 12:45 PM IST
stethoscope

ಸಾರಾಂಶ

ಆಯುಷ್ಮಾನ್ ಭಾರತ್ ಸೇರಿ ಸರ್ಕಾರದ ವಿವಿಧ ಆರೋಗ್ಯ ಭೀಮಾ ಯೋಜನೆಗಳಡಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಏಕರೂಪದ ಪ್ಯಾಕೇಜ್ ದರ ಶಿಫಾರಸು ಮಾಡಲು ಸಮಿತಿ

 ಬೆಂಗಳೂರು: ಆಯುಷ್ಮಾನ್ ಭಾರತ್ ಸೇರಿ ಸರ್ಕಾರದ ವಿವಿಧ ಆರೋಗ್ಯ ಭೀಮಾ ಯೋಜನೆಗಳಡಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಏಕರೂಪದ ಪ್ಯಾಕೇಜ್ ದರ ಶಿಫಾರಸು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಆಗಿದೆ. 

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ -2017ರ ಅಡಿ ದರ ನಿಗದಿಗೆ ಈ ಕ್ರಮ ಕೈಗೊಂಡಿದ್ದು, ನಿಯಮಗಳಲ್ಲಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಬದಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂದು ಬದಲಿಸಲು ಪ್ರಸ್ತಾಪಿಸಲಾಗಿದೆ. ತಜ್ಞರ ಸಮಿತಿಯಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದು, ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯದರ್ಶಿ ಪದನಿಮಿತ್ತ ಅಧ್ಯಕ್ಷರು. ಉಳಿದಂತೆ ಎಸ್‌ಎಎಸ್‌ಟಿ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ, ಆರೋಗ್ಯ ಇಲಾಖೆ ಆಯುಕ್ತರು, ವೈದ್ಯಕೀಯ ಶಿಕ್ಷಣದ ನಿರ್ದೇಶಕರು ಸೇರಿ 9 ಸದಸ್ಯರಿರುತ್ತಾರೆ. 

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...