ಕನ್ನಡಪ್ರಭ, ಸುವರ್ಣ ನ್ಯೂಸ್‌ನ ಐವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ

Published : Jan 03, 2025, 06:57 AM IST
Award

ಸಾರಾಂಶ

ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ 2023 ಮತ್ತು 2024ರ ಎರಡೂ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಐವರು ಪ್ರತಿನಿಧಿಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಬೆಂಗಳೂರು :  ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ 2023 ಮತ್ತು 2024ರ ಎರಡೂ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಐವರು ಪ್ರತಿನಿಧಿಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

‘ಕನ್ನಡಪ್ರಭ’ದ ಹುಬ್ಬಳ್ಳಿ ವಿಶೇಷ ವರದಿಗಾರ ಶಿವಾನಂದಗೊಂಬಿ 2023ನೇ ಸಾಲಿನ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ‘ಕೆರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು’ ವರದಿಗೆ ಈ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ರಾಜಕೀಯ ವಿಭಾಗದ ಮುಖ್ಯಸ್ಥ ಆನಂದ್‌ ಬೈದನಮನೆ ಮತ್ತು ಚೀಫ್‌ ಆ್ಯಂಕರ್‌ ಭಾವನಾ ನಾಗಯ್ಯ, 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸುವರ್ಣ ನ್ಯೂಸ್‌ ಡಿಜಿಟಲ್‌ ವಿಭಾಗದ ಮುಖ್ಯಸ್ಥೆ ಕೆ.ಎಸ್‌.ನಿರುಪಮಾ ಭಾಜನರಾಗಿದ್ದಾರೆ. ಬೆಂಗಳೂರು ವರದಿಗಾರ ನಂದೀಶ್‌ ಮಲ್ಲೇನಹಳ್ಳಿ 2024ನೇ ಸಾಲಿನ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಬಗೆಗಿನ ಸರಣಿ ಸುದ್ದಿಗೆ ಈ ಪ್ರಶಸ್ತಿ ದೊರಕಿದೆ.

ಒಟ್ಟಾರೆ ಎರಡೂ ಸಾಲಿನಲ್ಲಿ ತಲಾ ಒಬ್ಬ ಹಿರಿಯ ಪತ್ರಕರ್ತರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ, 30 ಮಂದಿಗೆ ವಾರ್ಷಿಕ ಪ್ರಶಸ್ತಿ ಮತ್ತು 10 ಮಂದಿ ಪತ್ರಕರ್ತರನ್ನು ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

2023ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆಯಾದವರು: 2023ನೇ ಸಾಲಿನ ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ.ಶಿವಣ್ಣ, ವಾರ್ಷಿಕ ಪ್ರಶಸ್ತಿಗೆ ಗಂಗಾಧರ ಮೊದಲಿಯಾರ್‌, ಪ್ರೊ.ಉಷಾರಾಣಿ ಎನ್‌. ಸುಶೀಲೇಂದ್ರ ನಾಯಕ್‌, ವಾಸುದೇವ ಹೊಳ್ಳ, ಆಲ್ಫ್ರೆಡ್‌ ಟೆನ್ನಿಸ್‌, ಮಾಲತಿ ಭಟ್‌, ಮನು ಅಯ್ಯಪ್ಪ, ಹರಿಯಬ್ಬೆ ಹೆಂಜಾರಪ್ಪ, ವಿಲಾಸ್‌ ನಾಂದೋಡ್ಕರ್‌, ಶಿವಕುಮಾರ್‌ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್‌ ಶೆಂಬೆಳ್ಳಿ, ಮನೋಜ್‌ಗೌಡ ಪಾಟೀಲ, ಆನಂದ ಬೈದನಮನೆ, ಮಧು ಜವಳಿ, ಎಂ.ಆರ್‌.ದಿನೇಶ್‌, ತಾರಾನಾಥ್‌, ಕೆ.ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್‌, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು(ಪುಂಡಲೀಕ ಪೈ), ನಿಹಾಲ್‌ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ, ಮುನೀರ್‌ ಅಹ್ಮದ್‌ ಆಜಾದ್‌, ಹನುಮಾನ್‌ ಸಿಂಗ್‌ ಜಮಾದಾರ್‌, ಜೈಮುನಿ, ಶಿವಮೂರ್ತಿ ಗುರುಮಠ, ಸಿರಾಜ್‌ ಬಿಸ್ರಳ್ಳಿ, ವಿವಿಧ ದತ್ತಿ ಪ್ರಶಸ್ತಿಗಳಿಗೆ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ, ವಿಜಯ್‌ ಕೋಟ್ಯಾನ್‌, ಶಿವಾನಂದ ಗೊಂಬಿ, ಸಂಧ್ಯಾ ಹೆಗಡೆ, ಶಿಲ್ಪ.ಪಿ, ಕೆ.ನೀಲಾ, ಕ.ಮ. ರವಿಶಂಕರ್‌, ವಿ.ವೆಂಕಟೇಶ್‌, ಎಚ್‌.ಪಿ.ಪುಣ್ಯವತಿ, ತುಂಗರೇಣುಕಾ ಆಯ್ಕೆಯಾಗಿದ್ದಾರೆ. ಆಂದೋಲನ ಪ್ರಶಸ್ತಿಗೆ ಸಂಜೆ ದರ್ಶನ ಪತ್ರಿಕೆಗೆ ಲಭಿಸಿದೆ.

2024ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆಯಾದವರು: 2024ನೇ ಸಾಲಿನ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ, ವಾರ್ಷಿಕ ಪ್ರಶಸ್ತಿಗೆ ಪ್ರೊ.ಎ.ಎಸ್‌.ಬಾಲಸುಬ್ರಹ್ಮಣ್ಯ, ರಿಷಿಕೇಷ್‌ ಬಹದ್ದೂರ್‌ ದೇಸಾಯಿ, ಸುಭಾಷ್‌ ಹೂಗಾರ, ಟಿ.ಗುರುರಾಜ್‌, ಕುಮಾರನಾಥ್‌ ಯು.ಕೆ., ಸಿದ್ದು ಕಾಳೋಜಿ, ಆರ್‌.ಕೆ.ಜೋಷಿ, ಪ್ರಕಾಶ್‌ ಶೇಠ್‌, ಆರುಂಡಿ ಶ್ರೀನಿವಾಸ ಮೂರ್ತಿ, ರವೀಶ್‌ ಎಚ್‌.ಎಸ್‌., ಭಾನುಪ್ರಕಾಶ್‌, ಮಹೇಶ್‌ ಶೆಟಗಾರ, ರಮೇಶ್‌ ಜಹಗೀರದಾರ, ನಿರುಪಮಾ, ದಿನೇಶ್‌ ಗೌಡಗೆರೆ, ಡಿ.ಸಿ.ಮಹೇಶ್‌, ಎಚ್‌.ಎಸ್‌.ಹರೀಶ್‌, ಶರಣಯ್ಯ ಒಡೆಯರ್‌, ಅಶ್ವಿನಿ ಎಂ.ಶ್ರೀಪಾದ, ರಿಜ್ವಾನ್‌ ಅಸದ್‌, ಬನ್ನಿ ಕಾಳಪ್ಪ, ಮನುಜಾ ವೀರಪ್ಪ, ಜಯಂತ್‌ ಜೆ., ವಿಖಾರ್‌ ಅಹ್ಮದ್‌ ಸಯೀದ್‌, ಡ.ಎನ್‌.ಶಾಂಭವಿ ನಾಗರಾಜ್‌, ರಮೇಶ್‌(ಹಾಬಿ ರಮೇಶ್‌), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್‌ ನಿಸಾರ್‌ ಹಮೀದ್‌, ಸಂದೀಪ್‌ ಸಾಗರ್‌, ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೆ.ಓಂಕಾರಮೂರ್ತಿ ಮತ್ತು ಡಿ.ಎಂ.ಕುರ್ಕೆ ಪ್ರಶಾಂತ್‌, ಬಿ.ಕೆ.ದೇವಯ್ಯ(ಅನು ಕಾರ್ಯಪ್ಪ), ನಂದೀಶ್‌ ಮಲ್ಲೇನಹಳ್ಳಿ, ಪ್ರಭು ಬ.ಅಡವಿಹಾಳ, ಮೊಹಮ್ಮದ್‌ ಅಖೀಲ್‌ ಉಡೇವು, ರಹಮತ್‌ ತರೀಕೆರೆ, ಮ್ಯುರಿಯಲ್‌ ನಿರ್ಮಲ ಡಿಸಿಲ್ವ, ಎಚ್‌.ಎಸ್‌.ಸುಧೀಂದ್ರಕುಮಾರ್‌ ಆಯ್ಕೆಯಾಗಿದ್ದಾರೆ. ಆಂದೋಲನ ಪ್ರಶಸ್ತಿ ಹೊಸಪೇಟೆ ಟೈಮ್ಸ್‌ ಪತ್ರಿಕೆಗೆ ದೊರಕಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ