15 ನಿಮಿಷದಲ್ಲಿ ಮುಸ್ಲಿಂರ ನರಮೇಧ: ಬಿಜೆಪಿಗ ಮಣಿಕಂಠ ಹೇಳಿಕೆ ವಿವಾದ

Published : Jun 02, 2025, 11:02 AM IST
Pew research muslim population by 2050

ಸಾರಾಂಶ

‘ಕಲಬುರಗಿಯಲ್ಲಿ ಪೊಲೀಸರನ್ನು ಕೇವಲ 15 ನಿಮಿಷ ತಡೆ ಹಿಡಿಯಿರಿ, ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತೇವೆ’ ಎಂಬುದಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬೆದರಿಕೆ

  ಕಲಬುರಗಿ : ‘ಕಲಬುರಗಿಯಲ್ಲಿ ಪೊಲೀಸರನ್ನು ಕೇವಲ 15 ನಿಮಿಷ ತಡೆ ಹಿಡಿಯಿರಿ, ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತೇವೆ’ ಎಂಬುದಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬೆದರಿಕೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮಣಿಕಂಠ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತೊಗೆಯಬೇಕು. ‘ಲವ್‌ ಜಿಹಾದ್ʼ ಆರೋಪಿಗಳನ್ನು 8 ದಿವಸಗಳಲ್ಲಿ ಸಾಯಿಸಲೇ ಬೇಕು. ಕಲಬುರಗಿಯಲ್ಲಿ ಪೊಲೀಸರನ್ನು ಕೇವಲ 15 ನಿಮಿಷ ತಡೆ ಹಿಡಿಯಿರಿ. ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತೇವೆ ಎಂದು ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸಂಬಂಧ ಸಯ್ಯದ್ ಅಲಿಮ್ ಇಲಾಹಿ ಎಂಬುವರು ದೂರು ನೀಡಿದ್ದಾರೆ. ಈ ದೂರು ಆಧರಿಸಿ, ಕೋಮು ಪ್ರಚೋದನೆ ಹೇಳಿಕೆ ಆರೋಪದಡಿ ಮಣಿಕಂಠ ಅವರ ವಿರುದ್ಧ ಇಲ್ಲಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು