‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ‘ಸುವರ್ಣ ಶಿಕ್ಷಣ ಮೇಳ’ ಉತ್ತಮ ಕಾರ್ಯವಾಗಿದ್ದು ಶ್ಲಾಘನೀಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು : ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ‘ಸುವರ್ಣ ಶಿಕ್ಷಣ ಮೇಳ’ ಉತ್ತಮ ಕಾರ್ಯವಾಗಿದ್ದು ಶ್ಲಾಘನೀಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಲೇಶ್ವರಂ ಸರ್ಕಲ್‌ನ ಸರ್ಕಾರಿ ಶಾಲೆ ಮೈದಾನದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ಆಯೋಜಿಸಿದ್ದ ಎರಡು ದಿನಗಳ ‘ಸುವರ್ಣ ಶಿಕ್ಷಣ ಮೇಳ’ಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೊಂದು ಉತ್ತಮ ಮೇಳವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಂದರ್ಭೋಚಿತವಾಗಿದೆ. ಭವಿಷ್ಯದಲ್ಲಿ ಯಾವ ಕೋರ್ಸ್ ಅಧ್ಯಯನ ಮಾಡಬೇಕು, ಯಾವ ಕಾಲೇಜು-ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಬೇಕು ಎಂಬ ಸಮಗ್ರ ಮಾಹಿತಿ ಇಲ್ಲಿ ಒಂದೇ ಸೂರಿನಡಿ ದೊರೆಯುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ರಾಜಕೀಯ ವಿಭಾಗದ ಸಂಪಾದಕ ಪ್ರಶಂತ್ ನಾತು, ನಟ ಪ್ರಜ್ವಲ್ ದೇವರಾಜ್, ನಟಿ ಬೃಂದಾ ಆಚಾರ್ಯ ಮತ್ತಿತರರು ಹಾಜರಿದ್ದರು.
ಕಾಲೇಜುಗಳ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಳ್ಳುವುದಕ್ಕಿಂತ ಖುದ್ದಾಗಿ ಇಲ್ಲಿಗೆ ಭೇಟಿ ನೀಡಿದರೆ ಹೆಚ್ಚಿನ ಮಾಹಿತಿ ಸಿಗಲಿದೆ. ಮೇಳಕ್ಕೆ ಆಗಮಿಸಿದ್ದರಿಂದ ತುಂಬಾ ಅನುಕೂಲವಾಯಿತು.
-ರಶ್ಮಿ, ವಿದ್ಯಾರ್ಥಿನಿ
ಮೇಳಕ್ಕೆ ಆಗಮಿಸಿದ್ದರಿಂದ ಮುಂದೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು, ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಮಗ್ರ ಮಾಹಿತಿ ದೊರೆಯಿತು.
- ಎಂ.ಕೆ.ದೀಕ್ಷಾ, ವಿದ್ಯಾರ್ಥಿನಿ
ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರವೇಶಾತಿ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಿಸುತ್ತಿದ್ದಾರೆ. ಮೇಳ ಆಯೋಜಿಸಿರುವುದಕ್ಕೆ ಧನ್ಯವಾದಗಳು.
-ಮನೀಶ್, ಮಂಡ್ಯ ಪಿಇಎಸ್ ಕಾಲೇಜು ಸಿಬ್ಬಂದಿ
ನಮ್ಮದು ಸರ್ಕಾರಿ ಸಂಸ್ಥೆಯಾಗಿದ್ದು ಒಟ್ಟಾರೆ 69 ಕೋರ್ಸ್‌ಗಳಿವೆ. ರಿಜಿಸ್ಟ್ರೇಷನ್ ಚೆನ್ನಾಗಿದೆ. 18 ರಿಂದ 80 ವರ್ಷದವರೆಗಿನವರೂ ಕೋರ್ಸ್‌ಗಳಿಗೆ ದಾಖಲಾಗಬಹುದು. ಮೇಳದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
-ಶಶಿಕಲಾ, ರಾಜ್ಯ ಮುಕ್ತ ವಿವಿಯ ಮಲ್ಲೇಶ್ವರಂ ಕೇಂದ್ರ
ಸಿಇಟಿ ಫಲಿತಾಂಶ ಹೊರಬಿದ್ದಿದ್ದು ಇಂತಹ ಸಮಯದಲ್ಲೇ ಶಿಕ್ಷಣ ಮೇಳ ಆಯೋಜನೆ ಮಾಡಿರುವುದು ಒಳ್ಳೆಯ ಸಂಗತಿಯಾಗಿದೆ. ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಾಗಿ ವಿಚಾರಿಸುತ್ತಿದ್ದಾರೆ.
-ರಾಜು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಿಬ್ಬಂದಿ
ಒಂದೇ ಸೂರಿನಡಿ ಇಷ್ಟೊಂದು ಸಂಖ್ಯೆಯ ವಿವಿಗಳು ಸೇರಿರುವುದು ವಿದ್ಯಾರ್ಥಿಗಳಿಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತಿದೆ. ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.
-ಪ್ರೊ.ಮಂಜುನಾಥ್, ರೇವಾ ವಿವಿ
ಉತ್ತಮ ವಿದ್ಯಾ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಅಭ್ಯಾಸ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ನಮ್ಮ ಸಂಸ್ಥೆಯಲ್ಲಿ ಪ್ರವೇಶಾತಿ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
-ಡಾ.ಟಿ.ಹೇಮಂತ್, ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ ಜಂಟಿ ರಿಜಿಸ್ಟ್ರಾರ್
ಬೇರೆ ಕಾಲೇಜುಗಳಿಗೆ ಹೋಲಿಸಿದರೆ ನಮ್ಮಲ್ಲಿ ಶುಲ್ಕ ಕಡಿಮೆ ಇದ್ದು ಉತ್ತಮ ಶಿಕ್ಷಣ ನೀಡಲಾಗುವುದು. 25 ವರ್ಷದ ಹಳೆಯ ಸಂಸ್ಥೆಯಾಗಿದ್ದು ವೈದ್ಯಕೀಯ, ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸ್‌ಗಳಿವೆ.
-ಹರೀಶ್, ಸಪ್ತಗಿರಿ ಎನ್‌ಪಿಎಸ್ ವಿವಿ
ಮಕ್ಕಳಿಗೆ ಇಂದೊಂದು ಉತ್ತಮ ಅವಕಾಶವಾಗಿದೆ. ಇಂಜಿನಿಯರಿಂಗ್, ಬಯೋಸೈನ್ಸ್ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಕೇಳುತ್ತಿದ್ದಾರೆ. ಶಿಕ್ಷಣ ಮೇಳ ಆಯೋಜಿಸಿರುವುದು ಪೋಷಕರಿಗೂ ಸಂತಸ ತಂದಿದೆ.
-ರಶ್ಮಿ, ಚಾಣುಕ್ಯ ವಿವಿ
ಮೇಳದಿಂದಾಗಿ ಸಾರ್ವಜನಿಕರಿಗೆ ನಮ್ಮ ವಿವಿ ಬಗ್ಗೆ ನೇರವಾಗಿ ಮಾಹಿತಿ ಸಿಗುತ್ತಿದೆ. ನಮ್ಮಲ್ಲಿರುವ ಕೋರ್ಸ್‌ಗಳ ಬಗ್ಗೆ ವಿವರವಾಗಿ, ನಿಖರವಾಗಿ ಮಾಹಿತಿ ನಿಡಲು ಸಾಧ್ಯವಾಗಿದೆ. ಇದಕ್ಕೆ ಧನ್ಯವಾದಗಳು.
-ಡಾ.ನರಸಿಂಹಮೂರ್ತಿ, ಪ್ರೆಸಿಡೆನ್ಸಿ ವಿವಿ
ಮೇಳದಿಂದಾಗಿ ನಮ್ಮ ವಿವಿಗೆ 130 ರಿಜಿಸ್ಟ್ರೇಷನ್ ಆಗಿವೆ. ಕಂಪ್ಯೂಟರ್ ಸೈನ್ಸ್, ಬಿಕಾಂ, ಬಿಸಿಎ, ಎಂಬಿಎ ಪ್ರವೇಶಾತಿಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ನಮ್ಮಲ್ಲಿ 12 ಕೊಟಿ ರು. ಸ್ಕಾಲರ್‌ಶಿಪ್ ನೀಡುತ್ತಿದ್ದೇವೆ.
-ಡಾ.ಈಶ್ವರ್‌ರೆಡ್ಡಿ, ಸಿಎಂಆರ್ ವಿವಿ
ಕಂಪ್ಯೂಟರ್ ಸೈನ್ಸ್ ಪ್ರವೇಶಾತಿ ಬಗ್ಗೆ ಹೆಚ್ಚಿನವರು ವಿಚಾರಿಸುತ್ತಿದ್ದಾರೆ. ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದವರಿಗೆ ಕೆ.ಆರ್.ಪುರದ ಟಿಸಿ ಪಾಳ್ಯದ ಕ್ಯಾಂಪಸ್‌ಗೆ ಭೇಟಿ ನೀಡಲು ಹೇಳುತ್ತಿದ್ದೇವೆ.
-ಡಾ.ಪ್ರೀತಿ, ಕೇಂಬ್ರಿಡ್ಜ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ
‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ಮಲ್ಲೇಶ್ವರಂ ಸರ್ಕಲ್‌ನ ಸರ್ಕಾರಿ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಸುವರ್ಣ ಶಿಕ್ಷಣ ಮೇಳ’ವನ್ನು ಶನಿವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ರಾಜಕೀಯ ವಿಭಾಗದ ಸಂಪಾದಕ ಪ್ರಶಂತ್ ನಾತು, ನಟ ಪ್ರಜ್ವಲ್ ದೇವರಾಜ್, ನಟಿ ಬೃಂದಾ ಆಚಾರ್ಯ ಮತ್ತಿತರರು ಹಾಜರಿದ್ದರು.
‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ಮಲ್ಲೇಶ್ವರಂ ಸರ್ಕಲ್‌ನ ಸರ್ಕಾರಿ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಸುವರ್ಣ ಶಿಕ್ಷಣ ಮೇಳ’ವನ್ನು ಶನಿವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ನಟ ಪ್ರಜ್ವಲ್ ದೇವರಾಜ್, ನಟಿ ಬೃಂದಾ ಆಚಾರ್ಯ ಮತ್ತಿತರರು ಹಾಜರಿದ್ದರು.