2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ

Published : Nov 14, 2025, 11:45 AM IST
holiday

ಸಾರಾಂಶ

ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದ್ದು, 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

  ಬೆಂಗಳೂರು :  ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದ್ದು, 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನ

ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದ್ದು, ಭಾನುವಾರ ಬರುವ ಮಹಾ ಶಿವರಾತ್ರಿ (ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ (ಅ.25), ಕನ್ನಡ ರಾಜ್ಯೋತ್ಸವ (ನ.1) ಹಾಗೂ ನರಕ ಚತುರ್ದಶಿ (ನ.8) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು (ಅ.10) ಸಾರ್ವತ್ರಿಕ ರಜೆ ದಿನಗಳ ಪಟ್ಟಿಯಲ್ಲಿ ನಮೂದಿಸಿಲ್ಲ.

ಸೆ.3 ರಂದು (ಗುರುವಾರ) ಕ್ರೈಲ್ ಮೂಹೂರ್ತ, ಅ.18 (ಭಾನುವಾರ) ತುಲಾ ಸಂಕ್ರಮಣ ಹಾಗೂ ನ.26 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2026ರ ಸಾರ್ವತ್ರಿಕ ರಜೆ ಪಟ್ಟಿ: 1) ಜ.15- ಮಕರ ಸಂಕ್ರಾತಿ, ಉತ್ತರಾಯಣ ಪುಣ್ಯಕಾಲ, 2) ಜ.26 - ಗಣರಾಜ್ಯೋತ್ಸವ

3) ಮಾ.19 - ಯುಗಾದಿ , 4) ಮಾ.2 - ರಂಜಾನ್, 5) ಮಾ.31 - ಮಹಾವೀರ ಜಯಂತಿ, 6) ಏ.3 - ಗುಡ್‌ ಫ್ರೈಡೇ, 7) ಏ.14 - ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ, 8) ಏ.20- ಬಸವ ಜಯಂತಿ, 9) ಮೇ 1- ಕಾರ್ಮಿಕ ದಿನಾಚರಣೆ, 10) ಮೇ 28- ಬಕ್ರೀದ್, 11) ಜೂ. 26- ಮೊಹರಂ ಕಡೆ ದಿನ, 12) ಆ.15- ಸ್ವಾತಂತ್ರ್ಯ ದಿನಾಚರಣೆ, 13) ಆ.26 - ಈದ್‌ ಮಿಲಾದ್

14) ಸೆ.14- ವರಸಿದ್ಧಿ ವಿನಾಯಕ ವ್ರತ, 15) ಅ.2 - ಗಾಂಧಿಜಯಂತಿ, 16) ಅ.20 - ಆಯುಧಪೂಜೆ, 17) ಅ.21 - ವಿಜಯದಶಮಿ, 18) ನ.10- ಬಲಿಪಾಡ್ಯಮಿ, ದೀಪಾವಳಿ, 19) ನ.27 - ಕನಕದಾಸ ಜಯಂತಿ, 20) ಡಿ.25 - ಕ್ರಿಸ್‌ಮಸ್

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಂ ಸಮುದಾಯದವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದು.

21 ಪರಿಮಿತ ರಜಾದಿನ:

2026ರ ಸಾಲಿನಲ್ಲಿ 21 ಪರಿಮಿತ ರಜಾ ಪಟ್ಟಿಗೆ ಸಂಪುಟ ಸಭೆ ಮಂಜೂರಾತಿ ನೀಡಿದೆ. ಈ ರಜಾ ಪಟ್ಟಿಯಲ್ಲಿ ತುಲಾ ಸಂಕ್ರಮಣ (ಅ.18) ಭಾನುವಾರ ಬರುವುದರಿಂದ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ. ಜತೆಗೆ ಸಾರ್ವತ್ರಿಕ ರಜೆ ದಿನಗಳಲ್ಲಿ ಬರುವ ಬುದ್ದ ಪೂರ್ಣಿಮೆ ಸೇರಿ ಕೆಲ ರಜೆಗಳನ್ನು ಪರಿಮಿತಿ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರಿ ಸವಲತ್ತುಗಳು ಅರ್ಹರಿಗೆ ತಲುಪಿಸಿ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಿ: ಸಿದ್ದಲಿಂಗಶ್ರೀ