ಕಾಲ್ತುಳಿತಕ್ಕೆ ಮೊಮ್ಮಗ ಬಲಿ: ಆಹಾರ ಬಿಟ್ಟಿದ್ದ ಅಜ್ಜಿ ಸಾವು

Published : Jun 10, 2025, 12:48 PM IST
RCB

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕುಣಿಗಲ್ ತಾಲೂಕಿನ ನಾಗಸಂದ್ರದ ಮನೋಜ್ ಸಾವನ್ನಪ್ಪಿದ್ದ. ಇದೀಗ ಮೊಮ್ಮಗನ ಸಾವಿನ ಶೋಕದಲ್ಲೇ ಆತನ ಅಜ್ಜಿ ಕೂಡ ಕೊನೆಯುಸಿರೆಳೆದಿದ್ದಾರೆ.

  ತುಮಕೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕುಣಿಗಲ್ ತಾಲೂಕಿನ ನಾಗಸಂದ್ರದ ಮನೋಜ್ ಸಾವನ್ನಪ್ಪಿದ್ದ. ಇದೀಗ ಮೊಮ್ಮಗನ ಸಾವಿನ ಶೋಕದಲ್ಲೇ ಆತನ ಅಜ್ಜಿ ಕೂಡ ಕೊನೆಯುಸಿರೆಳೆದಿದ್ದಾರೆ.

ಕುಣಿಗಲ್‌ ತಾಲೂಕು ನಾಗಸಂದ್ರದ ದೇವೀರಮ್ಮ (70) ಮೃತರು. ಬೆಂಗಳೂರಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್, ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದ. ಮೊಮ್ಮಗನ ಸಾವಿನಿಂದ ತೀವ್ರ ಬಸವಳಿದಿದ್ದ ದೇವೀರಮ್ಮ, ಅಂದಿನಿಂದ ಅನ್ನ-ಆಹಾರ ಬಿಟ್ಟಿದ್ದರು. ಇದೀಗ ಮೊಮ್ಮಗನ ಸಾವಿನ ನೋವಲ್ಲೇ ಈಕೆ ಕೂಡ ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತ ಮನೋಜ್‌ ಮನೆಯಲ್ಲಿ ಮತ್ತೊಮ್ಮೆ ಶೋಕ ಮಡುಗಟ್ಟಿದೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ