ಹಾಸನ ಡೀಸಿ - ಎಚ್ಡಿಕೆ ಫೈಟ್

Published : Oct 12, 2026, 10:25 AM IST
HD Kumaraswamy Vs Hassan DC LathaKumari

ಸಾರಾಂಶ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನಗರದ ದೇವಿಗೆರೆಯಲ್ಲಿ ಪೆಂಡಾಲ್‌ ಗಣಪತಿ ವಿಸರ್ಜನೆ ಮಾಡಿದ್ದನ್ನು ಖಂಡಿಸಿ ಎಸ್ಪಿಗೆ ಜಿಲ್ಲಾಧಿಕಾರಿ ನೋಟೀಸ್‌ ನೀಡಿದ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ.

ಬೆಂಗಳೂರು/ ಹಾಸನ : ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನಗರದ ದೇವಿಗೆರೆಯಲ್ಲಿ ಪೆಂಡಾಲ್‌ ಗಣಪತಿ ವಿಸರ್ಜನೆ ಮಾಡಿದ್ದನ್ನು ಖಂಡಿಸಿ ಎಸ್ಪಿಗೆ ಜಿಲ್ಲಾಧಿಕಾರಿ ನೋಟೀಸ್‌ ನೀಡಿದ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಲ್ಲಿ ಮಾತನಾಡಿ, ಜಿಲ್ಲಾಧಿಕಾರಿಯಾದ ತಕ್ಷಣ ತಲೆ ಮೇಲೆ ಎರಡು ಕೊಂಬು ಇದೆಯಾ? ಸ್ವಲ್ಪ ಎಚ್ಚರಿಕೆ ಇರಲಿ. ನಾನು ಸುಮ್ಮನೆ ಮಾತಾಡೋದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಈ ಅಧಿಕಾರಿ ಕೆಪಿಎಸ್ಸಿ ಕಾರ್ಯದರ್ಶಿ ಆಗಿದ್ದಾಗ ಏನು ಮಾಡಿದ್ದರು ಎನ್ನುವುದು ಗೊತ್ತಾ? ಅವರ ಹಣೆಬರಹ ಏನು ಎನ್ನುವುದು ಗೊತ್ತಾಗುತ್ತದೆ. ಅವರನ್ನು ರಜೆ ಮೇಲೆ ಕಳಹಿಸಿ ಸಸ್ಪೆಂಡ್ ಮಾಡಬೇಕಿತ್ತು. ಅದು ಬಿಟ್ಟು ಹಾಸನ ಜಿಲ್ಲಾಧಿಕಾರಿ ಹುದ್ದೆಯಲ್ಲಿ ತಂದು ಕೂರಿಸಿದ್ದಾರೆ ಎಂದು ಹರಿಹಾಯ್ದರು.

ಒಬ್ಬ ಎಸ್‌ಪಿಗೆ ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಎಸ್‌ಪಿ ಕೂಡ ಒಬ್ಬ ಹೆಣ್ಣು ಮಗಳು. ಜಿಲ್ಲಾಧಿಕಾರಿ ಏನು ಪಾಳೆಗಾರರಾ? ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದು ಗುಡುಗಿದರು.

ಡೀಸಿ ತಿರುಗೇಟು:

ಜಿಲ್ಲಾಧಿಕಾರಿ ಕೂಡ ಏಟಿಗೆ ತಿರುಗೇಟು ನೀಡುತ್ತಲೇ ಇದ್ದು, ತಮ್ಮ ವಾಟ್ಸ್‌ಆಪ್‌ ಸ್ಟೇಟಸ್‌ ನಲ್ಲಿ ‘You can attack me with lies, but you cannot break me with lies’ ಎಂದು ಹಾಕಿಕೊಂಡಿದ್ದಾರೆ. ಅಂದರೆ ಸುಳ್ಳುಗಳ ಮೂಲಕ ನೀವು ನನ್ನ ಮೇಲೆ ದಾಳಿ ಮಾಡಬಹುದು. ಆದರೆ, ಸುಳ್ಳುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎನ್ನುವ ಸಂದೇಶವುಳ್ಳ ಸ್ಟೇಟಸ್ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಎನ್ನುವುದು ಸ್ಪಷ್ಟವಾಗಿಲ್ಲ.

ದುರಹಂಕಾರದಲ್ಲಿ ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗಬೇಕು

ಎಲ್ಲಿ ಕೆಲಸ ಮಾಡುತ್ತಿದ್ದೀರಿ? ಅಧಿಕಾರ ನಡೆಸಬೇಕಾದರೆ ದುರಹಂಕಾರದಲ್ಲಿ ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗಬೇಕು ಮೊದಲು. ಅದನ್ನೇ ನಾನು ಹೇಳಿದ್ದೇನೆ. ಪೋಸ್ಟ್ ಮಾಡೋದು, ಸ್ಟೇಟಸ್ ಹಾಕೋದು ಅಂದರೆ ಏನು? ಯಾರು ಆ ಡಿಸಿಗೆ ಪೋಸ್ಟ್ ಮಾಡಲು ಅವಕಾಶ ಕೊಟ್ಟಿದ್ದು? ಸಾರ್ವಜನಿಕವಾಗಿ ಯಾರಾದರೂ ಮಾತನಾಡಿದರೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಅಷ್ಟು ಪರಿಜ್ಞಾನ ಇಲ್ಲವಾ ಈ ಜಿಲ್ಲಾಧಿಕಾರಿಗೆ? ಏನು ಪೋಸ್ಟ್ ಮಾಡ್ತಾರೆ? ಏನು ನಡೀತಾ ಇದೆ ಕರ್ನಾಟಕದಲ್ಲಿ ಎಂದು ಕಿಡಿಕಾರಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಂಗೆ ಗೊತ್ತಿಲ್ಲ, ಏನಿದ್ದರೂ ಸಾಹುಕಾರ್‌ ಕೇಳಿ: ಕೆಪಿಎಸ್ಸಿ ಸದಸ್ಯೆ ಗೀತಾ
ಜಿಬಿಎ 2.0 ತಂತ್ರಾಂಶ ಅಪ್‌ಡೇಟ್‌ ಆಗದೆ ಸಮಸ್ಯೆ