ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು

Published : May 04, 2025, 09:52 AM IST
Temperature hike feb

ಸಾರಾಂಶ

ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಿಸಿಲ ಬಿಸಿ ಹೆಚ್ಚಾಗಿದೆ. 

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಿಸಿಲ ಬಿಸಿ ಹೆಚ್ಚಾಗಿದೆ. ಪ್ರಮುಖವಾಗಿ ಕಲಬುರಗಿ, ಬೀದರ್‌ ಹಾಗೂ ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿ ವರದಿಯಾಗಿದೆ.

 ಕಲಬುರಗಿಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ಸಾಮಾನ್ಯವಾಗಿದ್ದರೆ, ಬೀದರ್‌ ಹಾಗೂ ವಿಜಯಪುರದಲ್ಲಿ ವಾಡಿಕೆ ಪ್ರಮಾಣಕ್ಕಿಂತ 1.8 ಡಿ.ಸೆ ಹೆಚ್ಚಾಗಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 37.2 ಡಿ.ಸೆ ದಾಖಲಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ 2.4 ಹೆಚ್ಚಾಗಿದೆ. 

ರಾಯಚೂರಿನಲ್ಲಿ 39, ಹಾಗೂ ಬಾಗಲಕೋಟೆಯಲ್ಲಿ 38.3, ಧಾರಾವಾಡ ಹಾಗೂ ಕೊಪ್ಪಳದಲ್ಲಿ ತಲಾ 38, ಗದಗ 37.9, ಬೆಳಗಾವಿಯಲ್ಲಿ 37, ಹಾವೇರಿಯಲ್ಲಿ 36.8, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ತಲಾ 36, ಬೆಂಗಳೂರು ನಗರದಲ್ಲಿ 33 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು