ಇಂದು ರಾಜ್ಯದ 1.49 ಲಕ್ಷ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ

Published : May 04, 2025, 09:41 AM IST
NEET exam rules 2025

ಸಾರಾಂಶ

ಪ್ರಸಕ್ತ 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಭಾನುವಾರ ದೇಶಾದ್ಯಂತ ನೀಟ್‌ (ಯುಜಿ) ಪರೀಕ್ಷೆ  

ಬೆಂಗಳೂರು :  ಪ್ರಸಕ್ತ 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಭಾನುವಾರ ದೇಶಾದ್ಯಂತ ನೀಟ್‌ (ಯುಜಿ) ಪರೀಕ್ಷೆ ನಡೆಯಲಿದ್ದು, ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ಪರೀಕ್ಷೆ ನಡೆಯಲಿದೆ. ತಪಾಸಣೆ ಹಾಗೂ ನೋಂದಣಿ ದೃಷ್ಟಿಯಿಂದ ಮಧ್ಯಾಹ್ನ 1.30ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌/ಪ್ಯಾನ್‌ ಕಾರ್ಡ್‌ ಸೇರಿ ಯಾವುದಾದರೊಂದು ಮಾನ್ಯತೆ ಇರುವ ಗುರುತಿನ ಚೀಟಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹಾಜರಾಗಬೇಕೆಂದು ನ್ಯಾಷನಲ್ ಟೆಸ್ಟಿಂಗ್‌ ಏಜೆನ್ಸಿ(ಎನ್‌ಟಿಎ) ಸೂಚಿಸಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ. ವಸ್ತ್ರಸಂಹಿತೆ ಅನುಸಾರ ಪೂರ್ಣ ತೋಳಿರುವ ಮೇಲಂಗಿ, ದೊಡ್ಡ ಬಟನ್ ಗಳಿರುವ ಶರ್ಟ್‌/ಪ್ಯಾಂಟ್‌/ಶೂ/ ಸಾಕ್ಸ್/ಎತ್ತರದ ಚಪ್ಪಲಿಗಳು/ ಕಿವಿಯೋಲೆ/ಬಳೆ/ಸರ/ಕಾಲ್ಗೆಜ್ಜೆ/ಮೂಗುತಿ/ಜಡೆ ಕ್ಲಿಪ್ ಹಾಗೂ ಇತರ ಯಾವುದೇ ಮೆಟಲ್ ಉಪಕರಣಗಳನ್ನು ಧರಿಸುವಂತಿಲ್ಲ, ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಎಂದು ತಿಳಿಸಲಾಗಿದೆ.

ಎನ್‌ಟಿಎಯಿಂದ ಶೋಧನಾ ಉಪಕರಣ ಮತ್ತು ಜಾಮರ್‌ ಅಳವಡಿಸಲು ಏಜೆನ್ಸಿಯವರನ್ನು ನಿಯೋಜಿಸಿದೆ. ರಾಜ್ಯದಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು