ವಾಯುಭಾರ ಕುಸಿತದಿಂದ ಭಾರೀ ಮಳೆ : ಡ್ಯಾಂಗಳ ಮಟ್ಟ ಏರಿಕೆ - ಕೆಆರೆಸ್‌ನಲ್ಲಿ ನೀರಿನ ಹೆಚ್ಚಳ

Published : Oct 26, 2026, 11:47 AM IST
KRS Dam

ಸಾರಾಂಶ

ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಕಂಡುಬಂದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ

ಮಡಿಕೇರಿ : ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಕಂಡುಬಂದಿದೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಇದರಿಂದಾಗಿ ಹಾರಂಗಿ ಜಲಾಶಯಕ್ಕೆ ಭಾನುವಾರ ಸುಮಾರು 2846 ಕ್ಯೂಸೆಕ್ ನೀರು ಹರಿದು ಬಂದಿದೆ.

ಜೂನ್ ಹಾಗೂ ಜುಲೈನಲ್ಲಿ ಮುಂಗಾರು ಮಳೆ ಗಣನೀಯ ಪ್ರಮಾಣದಲ್ಲಿ ಇಳಿಕೆ

ಜೂನ್ ಹಾಗೂ ಜುಲೈನಲ್ಲಿ ಮುಂಗಾರು ಮಳೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಜಿಲ್ಲೆಯಲ್ಲಿ ಸುಮಾರು ಶೇ.42ರಷ್ಟು ವಾಡಿಕೆ ಮಳೆ ಕೊರತೆಯುಂಟಾಗಿತ್ತು. ಆಗಸ್ಟ್‌ನಲ್ಲಿ ಒಂದಷ್ಟು ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಮೈದುಂಬಿತು. ನಂತರ ಮಳೆ ಕೊರತೆ ಸಾಕಷ್ಟು ಕಂಡುಬಂದಿದ್ದು, ಕಾವೇರಿ ನದಿ, ಹಾರಂಗಿ ಜಲಾಶಯದಲ್ಲಿ ನೀರು ಪ್ರಮಾಣ ತೀರಾ ಕುಸಿದಿತ್ತು.

ಹಾರಂಗಿ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ 500ರಿಂದ 600 ಕ್ಯೂಸೆಕ್‌ನಷ್ಟಿದ್ದ ಒಳಹರಿವು, ಸತತ ಮಳೆಯ ಪರಿಣಾಮ ಇದೀಗ 2,812 ಕ್ಯೂಸೆಕ್‌ಗೆ ಏರಿಕೆಯಾಗಿದೆ. 8.5 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 4.3 ಟಿಎಂಸಿ ನೀರು ಸಂಗ್ರಹವಾಗಿದೆ.

ಕೆಆರೆಸ್‌ನಲ್ಲಿ ನೀರಿನ ಮಟ್ಟ 3 ಅಡಿ ಹೆಚ್ಚಳ

ಕೊಡಗು ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಮತ್ತೆ 3 ಅಡಿ ಏರಿಕೆ ಕಂಡಿದೆ. ಒಳ ಹರಿವಿನ ಪ್ರಮಾಣ 12,282 ಕ್ಯುಸೆಕ್‌ಗೆ ತಲುಪಿದೆ. ಹೊರ ಹರಿವು 1771 ಕ್ಯುಸೆಕ್‌ ಇದೆ. ಅಣೆಕಟ್ಟೆಯ ನೀರಿನ ಮಟ್ಟ 103.52 ಅಡಿ ದಾಟಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಬ್ಬು ಬೆಳೆಗಾರರ ಜತೆ ಬೆಳಗಾವಿಯಲ್ಲಿ ಇಂದು ಡಿಕೆಶಿ ಮಹತ್ವದ ಸಭೆ
ಜಯನಗರದಲ್ಲಿ ಆರೆಸ್ಸೆಸ್‌ ಯಶಸ್ವಿ ಪಥ ಸಂಚಲನ