ಬೆಂಗ್ಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗೆ 30 ಎಕ್ರೆ ಭೂಸ್ವಾಧೀನ ಎತ್ತಿಹಿಡಿದ ಹೈ

Published : Jun 19, 2026, 10:51 AM IST
Banglore Honnavar Road

ಸಾರಾಂಶ

ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 30 ಎಕರೆ ಭೂ ಸ್ವಾಧೀನವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಸುಮಾರು 14 ವರ್ಷಗಳ ಹಿಂದೆ ನೀಡಿದ್ದ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ಇದೀಗ ವಜಾ ಮಾಡಿದೆ.

  ಬೆಂಗಳೂರು :  ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 30 ಎಕರೆ ಭೂ ಸ್ವಾಧೀನವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಸುಮಾರು 14 ವರ್ಷಗಳ ಹಿಂದೆ ನೀಡಿದ್ದ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ಇದೀಗ ವಜಾ ಮಾಡಿದೆ.

ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮತ್ತು ಶ್ರೀ ಪ್ರಸನ್ನ ಆಂಜನೇಯ ಟ್ರಸ್ಟ್‌ ಸಲ್ಲಿಸಿದ ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್‌ ಮತ್ತು ಎಸ್‌.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿ

ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗೆ 30 ಎಕರೆ ಭೂ ಸ್ವಾಧೀನ ಪ್ರಸ್ತಾವನೆಗೆ 1986ರ ಅ.9 ರಂದು ಅನುಮೋದಿಸಿ ಸರ್ಕಾರ ಆದೇಶ ಹೊರಡಿಸುವ ಮೊದಲು, ಭೂಮಾಲೀಕರು ಮಾರಾಟದ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ್ದರು. ಸಂಪೂರ್ಣ ಮಾರಾಟದ ಮೊತ್ತ ಪಡೆದಿದ್ದರು. ಭೂಮಿ ಸ್ವಾಧೀನವನ್ನೂ ನೀಡಲಾಗಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.

ಆದ್ದರಿಂದ ಭೂಮಾಲೀಕರು ಸ್ವಾಧೀನ ಪ್ರಕ್ರಿಯೆಗಳನ್ನು ಪ್ರಶ್ನಿಸದಂತೆ ತಡೆಯಲಾಗಿತ್ತು. ನಂತರ ಅದೂ ಅಂತಿಮ ಅಧಿಸೂಚನೆ ಹೊರಬಿದ್ದ ಸುಮಾರು ಎರಡು ದಶಕಗಳ ನಂತರ ಅದನ್ನು ಪ್ರಶ್ನಿಸಲಾಗಿತ್ತು. ಜಕ್ಕಸಂದ್ರ ಗ್ರಾಮದಲ್ಲಿರುವ ಭೂಮಿಯನ್ನು ಟ್ರಸ್ಟ್‌ ಪರ ಸ್ವಾಧೀನಪಡಿಸಿಕೊಳ್ಳಲಾಯಿತು, ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಣೆಗಾಗಿ 150 ನಿವೇಶನಗಳನ್ನು (30×40 ಚದರ ಅಡಿ) ಅಂದಿನ ನೆಲಮಂಗಲ ನಗರ ಪುರಸಭೆಗೆ ಉಚಿತವಾಗಿ ಹಸ್ತಾಂತರಿಸಲು ಒಪ್ಪಿಕೊಂಡಿತ್ತು. ಉಳಿದ ನಿವೇಶನಗಳನ್ನು ಟ್ರಸ್ಟ್‌ನ ಸದಸ್ಯರ ನಡುವೆ ವಿತರಿಸಬೇಕಾಗಿತ್ತು. ಅಂತಿಮ ಅಧಿಸೂಚನೆಯನ್ನು 1987ರಲ್ಲಿ ಹೊರಡಿಸಲಾಯಿತು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ವಿವರ

ಭೂ ಸ್ವಾಧೀನವನ್ನು 2006 ಮತ್ತು 2008ರ ನಡುವೆ‌ ಕೆಲ ಭೂಮಾಲೀಕರು ಸ್ವಾಧೀನವನ್ನು ಪ್ರಶ್ನಿಸಿದರು. 2012ರಲ್ಲಿ, ಏಕಸದಸ್ಯಪೀಠ ಸ್ವಾಧೀನ ರದ್ದುಗೊಳಿಸಿ, ಭೂಮಿ ವಾಪಸ್‌ ನೀಡಲು ಆದೇಶಿಸಿತು. ರಾಜ್ಯ ಸರ್ಕಾರ ಹಾಗೂ ಟ್ರಸ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯಲ್ಲಿ ಸಂಪೂರ್ಣ ಮೊತ್ತ ಪಾವತಿಸಿದ ಟ್ರಸ್ಟ್‌ ಪರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 

ನಿವೇಶನಗಳ ಮಾಲೀಕರು ತಮ್ಮ ಕುಟುಂಬ ಸದಸ್ಯರೊಂದಿಗೆ ವಸತಿಗಳನ್ನು ನಿರ್ಮಿಸುವ ಮೂಲಕ ಭೂಮಿ ಅಭಿವೃದ್ಧಿಪಡಿಸಿ, ಹಲವು ದಶಕಗಳೇ ಕಳೆದಿವೆ. ನಂತರ ಏಕಸದಸ್ಯಪೀಠ ಭೂ ಸ್ವಾಧೀನ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಹೇಳಲಾಗಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸ್ತೆ ಗುಂಡಿಗಳಿಗೆ ಶೀಘ್ರ ಮುಕ್ತಿ : ಬೈರೇಗೌಡ
ಯೋಗೀಶ್ ಗೌಡ ಹತ್ಯೆ ಕೇಸ್‌ : ಬೇಲ್‌ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್