ಹಿರಿಯೂರು ಸೀಟು ಬಿಕ್ಕಟ್ಟು ಇತ್ಯರ್ಥ ಹೊಣೆ ಎನ್‌ಡಿಎ ವರಿಷ್ಠರ ಹೆಗಲಿಗೆ

Published : Nov 27, 2026, 07:02 AM IST
Hiriyur By-Election 2026

ಸಾರಾಂಶ

ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಯಾವ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬುದರ ನಿರ್ಧಾರವನ್ನು ಎನ್‌ಡಿಎ ಒಕ್ಕೂಟದ ನಾಯಕರು ಶೀಘ್ರ ಕೈಗೊಳ್ಳಬೇಕು ಎಂಬ ಆಶಯವನ್ನು ಗುರುವಾರ ನಡೆದ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಸಭೆ ವ್ಯಕ್ತಪಡಿಸಿದೆ.

ಬೆಂಗಳೂರು : ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಯಾವ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬುದರ ನಿರ್ಧಾರವನ್ನು ಎನ್‌ಡಿಎ ಒಕ್ಕೂಟದ ನಾಯಕರು ಶೀಘ್ರ ಕೈಗೊಳ್ಳಬೇಕು ಎಂಬ ಆಶಯವನ್ನು ಗುರುವಾರ ನಡೆದ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಸಭೆ ವ್ಯಕ್ತಪಡಿಸಿದೆ.

ಈ ಸಂಬಂಧ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಉಪಚುನಾವಣೆ ಘೋಷಣೆಯಾಗುವ ಕೊನೆ ಹಂತದವರೆಗೂ ಕಾಯುವುದು ಬೇಡ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಟಿಕೆಟ್ ಯಾರಿಗೆ ಎಂಬುದರ ಬಗ್ಗೆ ಗೊಂದಲ

ಈಗಾಗಲೇ ಟಿಕೆಟ್ ಯಾರಿಗೆ ಎಂಬುದರ ಬಗ್ಗೆ ಗೊಂದಲ ಉದ್ಭವಿಸಿದೆ. ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಹೀಗಾಗಿ, ಗೊಂದಲ ಹೀಗೆಯೇ ಮುಂದುವರೆದಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ತಕ್ಷಣ ಸೂಕ್ತ ನಿರ್ಧಾರ ಕೈಗೊಂಡಲ್ಲಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವರಿಷ್ಠರನ್ನು ಮತ್ತೊಮ್ಮೆ ಸಂಪರ್ಕಿಸಿ ಶೀಘ್ರ ನಿರ್ಧಾರ ಕೈಗೊಂಡು ತಿಳಿಸುವಂತೆ ಒತ್ತಾಯಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಜೆಡಿಎಸ್ ಮೈತ್ರಿ ತಾತ್ಕಾಲಿಕ ಅಲ್ಲ. ಎನ್‌ಡಿಎ ಮೈತ್ರಿ ಕರ್ನಾಟಕದಲ್ಲಿ ದೀರ್ಘಕಾಲಕ್ಕೆ ಮುಂದುವರಿಸಿ ಕಾಂಗ್ರೆಸ್ ದುರಾಡಳಿತ ಕೊನೆಗೊಳಿಸಲು ಒಗ್ಗಟ್ಟಿನ ಹೋರಾಟ ಮಾಡುತ್ತೇವೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಕಾರಣಕ್ಕೂ ಮನಸ್ತಾಪ, ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಉಪ ಚುನಾವಣೆ, ಜಿಬಿಎ, ಜಿಪಂ ಚುನಾವಣೆಯಲ್ಲಿ ನಾಲ್ಕು ಎಂಎಲ್‌ಸಿ ಚುನಾವಣೆ ರೀತಿ ಒಗ್ಗಟ್ಟಿನ ಕೆಲಸ ಮಾಡುತ್ತೇವೆ. ಹಿರಿಯೂರು, ಧಾರವಾಡ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಅಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲೋದಷ್ಟೇ ಮುಖ್ಯ ಎಂದರು.

ಶೀಘ್ರದಲ್ಲೇ ತೀರ್ಮಾನ-ಅಶೋಕ್‌:

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಹಿರಿಯೂರು ಮತ್ತು ಧಾರವಾಡ ಗ್ರಾಮೀಣ ಉಪಚುನಾವಣೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬುದರ ಬಗ್ಗೆ ಅಂತಿಮ ತೀರ್ಮಾನವನ್ನು ಕೇಂದ್ರದ ನಾಯಕರು ಶೀಘ್ರದಲ್ಲೇ ಕೈಗೊಳ್ಳಲಿದ್ದಾರೆ. ಯಾವುದೇ ಗೊಂದಲ ಅಥವಾ ಹಗ್ಗಜಗ್ಗಾಟ ಇಲ್ಲ. ಸಂಪೂರ್ಣ ಸ್ಪಷ್ಟತೆ ಇದೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಶಾ ಕಾರ್ಯಕರ್ತೆಯರು ಇದ್ದರೂ, ಇಲ್ಲದಿದ್ದರೂ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ : ಖಾದರ್‌
ಬ್ಲ್ಯಾಕ್‌ಮೇಲ್‌ ಮಾಡಬೇಡಿ : ಆಶಾ ಸಿಬ್ಬಂದಿಗೆ ಸಿಎಂ ವಾರ್ನಿಂಗ್‌