ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಬುರುಡೆ ಬಿಟ್ಟಿದ್ದ ಚಿನ್ನಯ್ಯನ ತಂದೆ ನಂಜಯ್ಯ ಮೂಲತಃ ತಮಿಳುನಾಡಿನವರು. ಅವರು ಮಂಡ್ಯದ ಚಿಕ್ಕಬಳ್ಳಿ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದರು.
ಚಿನ್ನಯ್ಯ 1980ರಲ್ಲಿ ಜನಿಸಿದ್ದನು. 1987ರಲ್ಲಿ ಶಾಲೆಗೆ ದಾಖಲಾಗಿ 1995ರಲ್ಲಿ ಶಾಲೆ ಬಿಟ್ಟ ಬಗ್ಗೆ ದಾಖಲೆ ದೊರೆತಿದೆ. 1994ರಲ್ಲಿ ಈತನ ಅಕ್ಕ ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೂಲಕ ಈತನೂ ಧರ್ಮಸ್ಥಳದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಲ್ಲಿ ಕೆಲಸ ಬಿಟ್ಟ ಬಳಿಕ ತಮಿಳುನಾಡಿಗೆ ತೆರಳಿದ್ದ.
ಎರಡು ವರ್ಷಗಳ ಹಿಂದೆ ಚಿನ್ನಯ್ಯ ತಮಿಳುನಾಡಿನ ಈರೋಡ್ ಬಳಿಯ ಚಿಕ್ಕರಸಿಪಾಳ್ಯ ಬಳಿ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ. ಮೃತ ಸೌಜನ್ಯನ ಅಜ್ಜ ಈತನನ್ನು ಉಜಿರೆಗೆ ಕರೆಸಿ ಅಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಸಿದ್ದರು. ಬಳಿಕ ಧರ್ಮಸ್ಥಳದಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಆತನ ಮೇಲೆ ಗುರುತರ ಆರೋಪ ಬಂದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಬಳಿಕ ಆತ ತಮಿಳುನಾಡಿಗೆ ತೆರಳಿದ್ದ.
ಈಗ ಮತ್ತೆ ಉಜಿರೆಗೆ ಬಂದ ಆತ ಬುರುಡೆ ಟೀಂನೊಂದಿಗೆ ಸಂಪರ್ಕ ಬೆಳೆಸಿದ್ದ. ಹತ್ಯೆಯಾದ ಸೌಜನ್ಯನ ಮಾವನಿಂದ ತಿಮರೋಡಿಗೆ ಚಿನ್ನಯ್ಯ ಪರಿಚಯವಾಗಿ, ಅಲ್ಲಿಂದ ಷಡ್ಯಂತ್ರ ನಡೆಯಿತು. ಹಲವು ಸುಳ್ಳಿನ ಸರಮಾಲೆಗಳನ್ನು ಸೃಷ್ಟಿಸಿ ಈ ಪ್ಲಾನ್‌ನಲ್ಲಿ ಪಾತ್ರಧಾರಿಯಾಗಿ ಕೆಲಸ ಮಾಡಿದ್ದ.