ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡಲು ಐಎಂಎಫ್‌ ಆಸಕ್ತಿ

Published : Sep 07, 2025, 10:11 AM IST
IMF

ಸಾರಾಂಶ

ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್‌ ಡಿಸಿಯ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ನಿಯೋಗವು ವಾರ್ಷಿಕ ಆರ್ಟಿಕಲ್‌ ಸಮಾಲೋಚನೆಯ ಭಾಗವಾಗಿ ಶನಿವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿತು.

  ಬೆಂಗಳೂರು :  ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್‌ ಡಿಸಿಯ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ನಿಯೋಗವು ವಾರ್ಷಿಕ ಆರ್ಟಿಕಲ್‌ ಸಮಾಲೋಚನೆಯ ಭಾಗವಾಗಿ ಶನಿವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿತು.

ಈ ಐಎಂಎಫ್‌ ನಿಯೋಗವು ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆ ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳ ಬಲಪಡಿಸುವಿಕೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವ ಕುರಿತು ರಚನಾತ್ಮಕ ಸವಾಲುಗಳನ್ನು ಗುರಿಯಾಗಿಸಿಕೊಂಡು ರಾಜ್ಯಮಟ್ಟದ ಉಪಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿತು.

ಈ ನಿಯೋಗದಲ್ಲಿ ಐಎಂಎಫ್‌ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥ ಹೆರಾಲ್ಡ್ ಫಿಂಗರ್, ಭಾರತದ ಹಿರಿಯ ನಿವಾಸಿಗಳ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್, ಐಎಂಎಫ್‌ ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಇದ್ದರು. ಈ ವೇಳೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಸಹ ಉಪಸ್ಥಿತರಿದ್ದರು. 

PREV
Read more Articles on

Recommended Stories

ವರ್ಷದ ಕೊನೆ ಚಂದ್ರಗ್ರಹಣ ಪ್ರಯುಕ್ತ ಬೆಂಗಳೂರು ನಗರದ ಹಲವು ಬೆಂಗಳೂರು ದೇಗುಲಗಳು ಬಂದ್‌
ವೀರರಾಘವನಪಾಳ್ಯ ಶಾಲೆಗೂ ಮುಖ್ಯಶಿಕ್ಷಕರಿಗೂ ಪ್ರಶಸ್ತಿ