77ನೇ ಸ್ವಾತಂತ್ಯ ದಿನಾಚರಣೆ : ಪ್ರಧಾನಿ ಜತೆ ಸಂವಾದಕ್ಕೆ ರಾಜ್ಯದ 6 ವಿದ್ಯಾರ್ಥಿಗಳ ಆಯ್ಕೆ

ಸಾರಾಂಶ

77ನೇ ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯದಿಂದ 6 ಪಿಯುಸಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬೆಳಗಾವಿ :  ಭಾರತ ಸ್ವಾತಂತ್ರ್ಯದ 75 ವರ್ಷಗಳ \Bಆಜಾದಿ ಕಾ ಅಮೃತ ಮಹೋತ್ಸವದ \Bಹಿನ್ನೆಲೆ ಶ್ರಮದಾನದ ಮೂಲಕ ಮೇರಿ ಮಿಟ್ಟಿ, ಮೇರಾ ದೇಶ ಅಭಿಯಾನ ಹಾಗೂ ಅಮೃತ ವಾಟಿಕಾ ನಿರ್ಮಾಣಕ್ಕೆ ಶ್ರಮಿಸಿದ ಸೇವೆ ಪರಿಗಣಿಸಿ 77ನೇ ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯದಿಂದ 6 ಪಿಯುಸಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂವರು ಮತ್ತು ಗದಗ ಜಿಲ್ಲೆಯ ಓರ್ವ ಮತ್ತು ರಾಯಚೂರು ಜಿಲ್ಲೆ ಇಬ್ಬರು ಆಯ್ಕೆಯಾಗಿದ್ದಾರೆ. ಬೆಳಗಾವಿ ನಗರದ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಸಂಜನಾ ಮಂಜುನಾಥ ಮುದಿಗೌಡರ ಮತ್ತು ಕಲಾ ವಿಭಾಗದ ಕೀರ್ತಿ ಅರ್ಜುನ್ ಜಟಗ್ಗನ್ನವರ ಹಾಗೂ ಚಿಕ್ಕೋಡಿ ತಾಲೂಕಿನ ಕೆರೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಗರ ಮಲ್ಲಪ್ಪ ಬೆಕ್ಕೇರಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಜೊತೆಗೆ ಸಂವಾದಕ್ಕೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ ಘಟಕದಲ್ಲಿ ಸ್ವಯಂ ಸೇವಕರಾಗಿದ್ದಾರೆ.

Share this article