ಬರಿಗೈಲೀ ವಾಪಸ್ ಹೋದ ರಷ್ಯಾ ಮಹಿಳೆ ಮಾಜಿ ಗೆಳಯ

Published : Jul 18, 2025, 11:05 AM IST
russia

ಸಾರಾಂಶ

ಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಮಾಜಿ ಪ್ರಿಯಕರ ಇಸ್ರೇಲ್‌ನ ಡ್ರೋರ್ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ತುಮಕೂರು: ಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಮಾಜಿ ಪ್ರಿಯಕರ ಇಸ್ರೇಲ್‌ನ ಡ್ರೋರ್ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

 ಆತನ ಮಾಜಿ ಲಿವಿನ್‌ ಗೆಳತಿ ನೀನಾ ಕುಟೀನಾ ಮತ್ತು ಇಬ್ಬರು ಮಕ್ಕಳನ್ನು ತುಮಕೂರಿನ ದಿಬ್ಬೂರಿನಲ್ಲಿರುವ ಎಫ್‌ಡಿಸಿ (ಫಾರೀನ್ ಡಿಟೆನ್ಷನ್ ಸೆಂಟರ್)ಯಲ್ಲಿ ಇರಿಸಲಾಗಿದೆ. ಅವರನ್ನು ಭೇಟಿಯಾಗಲು ಗುರುವಾರ ಎಫ್‌ಡಿಸಿಗೆ ಬಂದ ಡ್ರೋರ್‌ಗೆ ಅಲ್ಲಿನ ಸಿಬ್ಬಂದಿ ಅನುಮತಿ ನಿರಾಕರಿಸಿದರು ಎನ್ನಲಾಗಿದೆ. 

ಮಕ್ಕಳಿಗೆ ನೀಡಲು ಗಿಪ್ಟ್‌ನೊಂದಿಗೆ ಬಂದಿದ್ದ ಡ್ರೋರ್‌ಗೆ ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಕಿಟಕಿಯಲ್ಲಿ ಮಕ್ಕಳಿಗೆ ‘ಹಾಯ್’ ಹೇಳಿ ಬರಿಗೈನಲ್ಲಿ ವಾಪಾಸ್ ಆಗಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಡ್ರೋರ್, ಮಕ್ಕಳು ತಾಯಿ ಜೊತೆ ಇರಬೇಕು. ತಾಯಿ ಒಪ್ಪಿಗೆ ಇಲ್ಲದೆ ಮಕ್ಕಳನ್ನು ಕರೆದೊಯ್ಯುವುದಿಲ್ಲ. ಮಕ್ಕಳ ಭೇಟಿಗೆ ಮತ್ತೆ ಪ್ರಯತ್ನಿಸುತ್ತೇನೆ’ ಎಂದರು.

PREV
Read more Articles on

Recommended Stories

ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು
ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ