ಸಚಿವ ಜಾರ್ಜ್‌ ಆಪ್ತ ಎಲೆಕ್ಟ್ರಿಕ್‌ ಗುತ್ತಿಗೆದಾರರಿಗೆ ಐಟಿ ಶಾಕ್‌

Published : Jul 29, 2025, 03:45 AM IST
Income Tax Department (File Photo)

ಸಾರಾಂಶ

ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರ ಆಪ್ತರು ಎನ್ನಲಾದ ಇಬ್ಬರು ಎಲೆಕ್ಟ್ರಿಕ್‌ ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬೆಂಗಳೂರು : ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರ ಆಪ್ತರು ಎನ್ನಲಾದ ಇಬ್ಬರು ಎಲೆಕ್ಟ್ರಿಕ್‌ ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಎಲೆಕ್ಟ್ರಿಕ್‌ ಗುತ್ತಿಗೆದಾರರ ಯಲಹಂಕ ಮನೆ ಹಾಗೂ ಕಚೇರಿಗಳು ಸೇರಿ 12 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಟೆಂಡರ್‌ನಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇಂಧನ ಸಚಿವ ಕೆ.ಜೆ.ಜಾರ್ಜ್‌ ಸೇರಿ ಬೆಸ್ಕಾಂನ ಕೆಲ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವ ಕೆ.ಜೆ.ಜಾರ್ಜ್‌ ಅವರ ಆಪ್ತರೆನ್ನಲಾದ ಇಬ್ಬರು ಎಲೆಕ್ಟ್ರಿಕ್‌ ಗುತ್ತಿಗೆದಾರರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ದಾಳಿ ಕುರಿತು ಅದಾಯ ತೆರಿಗೆ ಇಲಾಖೆ ಈವರೆಗೂ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಸಚಿವ ಜಾರ್ಜ್‌ ಆಪ್ತ ಎಲೆಕ್ಟ್ರಿಕ್‌ ಗುತ್ತಿಗೆದಾರರಿಗೆ ಐಟಿ ಶಾಕ್‌

- ಯಲಹಂಕದ ಮನೆ ಸೇರಿ 12 ಕಡೆ ದಾಳಿ । ಬೆಳ್ಳಂಬೆಳಗ್ಗೆ ದಾಳಿ, ದಾಖಲೆ ಪರಿಶೀಲನೆ

- ಟೆಂಡರ್‌ ಅಕ್ರಮ ಬಗ್ಗೆ ಆರೋಪಿಸಿದ್ದ ಬಿಜೆಪಿ । ಈ ಬಗ್ಗೆ ಕೋರ್ಟ್‌ಗೆ ದೂರಿದ್ದ ಬಿಜೆಪಿ

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್