ಕೆಪಿಎಸ್ಸಿ ಮಾಜಿ ಸದಸ್ಯೆ ಶಾಂತಾ ಪತ್ತೆ ಹಚ್ಚಲು ಲುಕೌಟ್‌ ನೋಟಿಸ್‌

Published : Sep 01, 2026, 08:41 AM IST
KPSC

ಸಾರಾಂಶ

ಕೆಪಿಎಸ್‌ಸಿ ನೇಮಕಾತಿ ಹಗರಣ ಸಂಬಂಧ ತಲೆಮರೆಸಿಕೊಂಡಿರುವ ಆಯೋಗದ ಮಾಜಿ ಸದಸ್ಯೆ, ಕಲಬುರಗಿ ಜಿಲ್ಲೆಯ ಶಾಂತಾ ಹೊಸಮನಿ ಅವರ ಪತ್ತೆಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಲುಕೌಟ್‌ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಸಂಬಂಧ ತಲೆಮರೆಸಿಕೊಂಡಿರುವ ಆಯೋಗದ ಮಾಜಿ ಸದಸ್ಯೆ, ಕಲಬುರಗಿ ಜಿಲ್ಲೆಯ ಶಾಂತಾ ಹೊಸಮನಿ ಅವರ ಪತ್ತೆಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಲುಕೌಟ್‌ ನೋಟಿಸ್ ಜಾರಿಗೊಳಿಸಿದೆ.

ಶಾಂತಾ ತಲೆಮರೆಸಿಕೊಂಡಿದ್ದು ಎರಡು ಬಾರಿ ಸಿಐಡಿ ನೋಟಿಸ್

ಈ ಹಗರಣ ಬೆಳಕಿಗೆ ಬಂದ ನಂತರ ಶಾಂತಾ ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಿಐಡಿ ನೋಟಿಸ್ ನೀಡಿತ್ತು. ಆದರೆ ಇದುವರೆಗೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಶಾಂತಾ ಹೊಸಮನಿ ವಿರುದ್ಧ ಲುಕೌಟ್‌ ನೋಟಿಸ್ ಅನ್ನು ಸಿಐಡಿ ಹೊರಡಿಸಿದೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ

ಹೀಗಾಗಿ, ದೇಶ ತೊರೆಯಲು ಯತ್ನಿಸಿದರೆ ಕೂಡಲೇ ವಿಮಾನ ನಿಲ್ದಾಣಗಳಲ್ಲಿ ಶಾಂತಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯಲಿದ್ದಾರೆ. ಇದರಿಂದ ಶಾಂತಾ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೆಪಿಎಸ್‌ಸಿ ಸದಸ್ಯರಾಗಿದ್ದಾಗ ನಡೆದ ಕೆಎಎಸ್‌ ಅಧಿಕಾರಿಗಳ ನೇಮಕಾತಿಯಲ್ಲಿ ಶಾಂತಾ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಗರಣ ಬೆಳಕಿಗೆ ಬರುವ ಕೆಲವೇ ದಿನಗಳ ಮುನ್ನ ಅವರ ಸದಸ್ಯತ್ವ ಅ‍ವಧಿ ಮುಗಿದಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

3200 ರೈತರಿಗೆ ಬಿಡಿಎ ಸೈಟ್‌ - ಬೆಂಗಳೂರಲ್ಲಿ ₹16000 ಕೋಟಿ ವೆಚ್ಚದ ಕಾರಂತ ಬಡಾವಣೆ
ಬೆಂಗಳೂರು : ಕೆಲವು ಮೇಲ್ಸೆತುವೆ ರಸ್ತೆಗಳಲ್ಲಿ ಬೈಕ್‌, ಆಟೋಗೆ ನಿರ್ಬಂಧ