ಮಧುಸೂದನ್‌ ಸಾಯಿಗೆ ಫಿಜಿ ದೇಶದ ಅತ್ಯುಚ್ಚ ನಾಗರಿಕ ಗೌರವ

ಸಾರಾಂಶ

ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ರಿಸರ್ಚ್‌ನ ಸ್ಥಾಪಕ ಮಧುಸೂದನ್‌ ಸಾಯಿ ಅವರಿಗೆ ಫಿಜಿ ದೇಶ ತನ್ನ ಅತ್ಯುಚ್ಚ ನಾಗರಿಕ ಪ್ರಶಸ್ತಿ ‘ಕಂಪ್ಯಾನಿಯರ್‌ ಆಫ್‌ ದಿ ಆರ್ಡರ್‌ ಆಫ್‌ ಫಿಜಿ’ ನೀಡಿ ಪುರಸ್ಕರಿಸಿದೆ.

ಬೆಂಗಳೂರು: ಚಿಕ್ಕಬಳ್ಳಾಪುರದ ಶ್ರೀಮಧುಸೂದನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ರಿಸರ್ಚ್‌ನ ಸ್ಥಾಪಕ ಮಧುಸೂದನ್‌ ಸಾಯಿ ಅವರಿಗೆ ಫಿಜಿ ದೇಶ ತನ್ನ ಅತ್ಯುಚ್ಚ ನಾಗರಿಕ ಪ್ರಶಸ್ತಿ ‘ಕಂಪ್ಯಾನಿಯರ್‌ ಆಫ್‌ ದಿ ಆರ್ಡರ್‌ ಆಫ್‌ ಫಿಜಿ’ ನೀಡಿ ಪುರಸ್ಕರಿಸಿದೆ. 

ಫಿಜಿ ದೇಶದಲ್ಲಿ ಶ್ರೀ ಸತ್ಯಸಾಯಿ ಸಂಜೀವಿನಿ ಮಕ್ಕಳ ಆಸ್ಪತ್ರೆ ತೆರೆದಿದ್ದಕ್ಕಾಗಿ ಮಧುಸೂದನ್‌ ಅವರಿಗೆ ಅತ್ಯುಚ್ಚ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಶುಕ್ರವಾರ ಫಿಜಿಯ ಅಧ್ಯಕ್ಷ ರಾತು ನೈಕಾಮಾ ಲಲಬಲಾವು ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಧುಸೂದನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಎಂದು ಮಧುಸೂದನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದರು. 

Share this article