ಗಂಡಸರಿಗೆ ಸೀರೆ ಉಡಿಸಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೂಲಿ ವಂಚನೆ !

Published : Apr 08, 2025, 11:30 AM IST
Money

ಸಾರಾಂಶ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡಸರಿಗೆ ಸೀರೆ ಉಡಿಸಿ ಮಹಿಳೆಯರು ಪಾಲ್ಗೊಂಡ ದಾಖಲೆ ತೋರಿಸಿ ಹಣ ಲಪಟಾಯಿಸಲು ನಡೆದ ಸಂಚೊಂದು ಬಹಿರಂಗವಾಗಿದೆ.

 ಯಾದಗಿರಿ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡಸರಿಗೆ ಸೀರೆ ಉಡಿಸಿ ಮಹಿಳೆಯರು ಪಾಲ್ಗೊಂಡ ದಾಖಲೆ ತೋರಿಸಿ ಹಣ ಲಪಟಾಯಿಸಲು ನಡೆದ ಸಂಚೊಂದು ಬಹಿರಂಗವಾಗಿದೆ. ಯಾದಗಿರಿ ಸಮೀಪದ ಮಲ್ಹಾರ್‌ ಗ್ರಾಮದಲ್ಲಿ ಸಣ್ಣ ಲಿಂಗಪ್ಪ ಹೊಲದಲ್ಲಿ 3 ಲಕ್ಷ ರು.ಗೆ ನಾಲೆ ಹೂಳೆತ್ತುವ ಕಾಮಗಾರಿ ಮಂಜೂರಾಗಿತ್ತು.

ನರೇಗಾ ಕಾಮಗಾರಿಯಲ್ಲಿ ಮಹಿಳೆಯರೂ ಪಾಲ್ಗೊಳ್ಳಬೇಕೆಂಬ ನಿಯಮ ಪಾಲಿಸಲು ಗಂಡಸರಿಗೇ ಸೀರೆ ಊಡಿಸಿ ಹೆಂಗಸರ ಲೆಕ್ಕದಲ್ಲಿ ಹಣ ಲಪಟಾಯಿಸಲು ಸಂಚು ನಡೆಸಿರುವ ಬಗ್ಗೆ ಭಾವಚಿತ್ರಗಳು ಸಾಮಾಜಿಕ ಜಾಲತಾಣ-ಮಾಧ್ಯಮಗಳಲ್ಲಿ ಸೋಮವಾರ ಹರಿದಾಡಿ ಸಂಚಲನ ಮೂಡಿಸಿದ್ದವು. ನಾಲ್ವರು ಪುರುಷರಿಗೆ ಸೀರೆ ಉಡಿಸಿ ಕೂಲಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಆರೋಪ ಕೇಳಿ ಬಂದಿದ್ದವು. ಈ ಬಗ್ಗೆ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಡಿಯಾ, ಫೆಬ್ರವರಿಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ಆಗಲೇ ಬಂದ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ವೀರೇಶ ಎಂಬ ಹೊರಗುತ್ತಿಗೆ ನೌಕರನನ್ನು ಅಮಾನತು ಮಾಡಲಾಗಿದೆ. ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಪೌರ ಕಾರ್ಮಿಕನಾಗಿ ಪೊರಕೆ ಹಿಡಿದು ರಸ್ತೆ ಗುಡಿಸಿದ ಅಮೆರಿಕ ಪ್ರಜೆ!
ಸರ್ಕಾರದ ಪ್ರತಿ ಇಲಾಖೆಯ ಮೇಲೂ ಲೋಕಾಯುಕ್ತ ಕಣ್ಣು