ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು

Published : Feb 16, 2026, 12:02 PM IST
 Tree

ಸಾರಾಂಶ

ಜಾನುವಾರಿಗೆ ಮೇವು ಮತ್ತು ಸೊಪ್ಪು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಕಡಿದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವನಪ್ಪಿದ ದುರ್ಘಟನೆ ಶನಿವಾರ ನಡೆದಿದೆ.ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿಯಾದ ಹೇಮಂತ್ (27) ಮೃತ ವ್ಯಕ್ತಿ.

ಆನಂದಪುರ: ಜಾನುವಾರಿಗೆ ಮೇವು ಮತ್ತು ಸೊಪ್ಪು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಕಡಿದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವನಪ್ಪಿದ ದುರ್ಘಟನೆ ಶನಿವಾರ ನಡೆದಿದೆ.

ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿ

ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿಯಾದ ಹೇಮಂತ್ (27) ಮೃತ ವ್ಯಕ್ತಿ.

ಕಾಡಿನಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ದುರ್ಘಟನೆ

ಮೃತ ಹೇಮಂತ್ ಫೆ.14ರಂದು ಎಂದಿನಂತೆ ಜಾನುವಾರಿಗೆ ಮೇವು ಮತ್ತು ಸೊಪ್ಪು ತರಲು ಬಾಳೆಗುಂಡಿಯ ಕಾಡಿನಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ, ಆಕಸ್ಮಿಕವಾಗಿ ಮರದ ರೆಂಬೆ ಹೇಮಂತನ ಮರ್ಮಾಂಗಕ್ಕೆ ಹೊಡೆದಿದೆ. ಆಯತಪ್ಪಿ ಮರದಿಂದ ಕೆಳಗೆ ಬಿದ್ದ ಹೇಮಂತನನ್ನು ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ನೋಡಿ ಅವರ ಮನೆಗೆ ತಿಳಿಸಿದರು ನಂತರ ಆತನನ್ನು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ತೀರ್ಥಳ್ಳಿಯ ಬಳಿ ಹೇಮಂತನ ಆರೋಗ್ಯ ಹದಗೆಟ್ಟು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌
ಪರಿಶಿಷ್ಟರಿಗೆ ಬಜೆಟಲ್ಲಿ ಪ್ರತ್ಯೇಕ ಅನುದಾನಕ್ಕೆ ಸಿಎಂಗೆ ಬೇಡಿಕೆ?