ಬಡ್ಡಿ ಮನ್ನಾ ಮಾಡಿದರೂ ತೆರಿಗೆ ಪಾವತಿಸದ ಜನ - 2 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಂದ ಬಾಕಿ

Published : Feb 27, 2025, 07:36 AM IST
BBMP

ಸಾರಾಂಶ

ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡುವ ಒನ್‌ ಟೈಮ್‌ ಸೆಟಲ್ಮೆಂಟ್‌ (ಒಟಿಎಸ್‌) ಯೋಜನೆ ಜಾರಿಗೆ ತಂದರೂ ನಿಗದಿತ ₹5,210 ಕೋಟಿ ತಲುಪಲು ಸಾಧ್ಯವಾಗದ ಬಿಬಿಎಂಪಿ ಇದೀಗ ಮುಂದಿನ ಆರ್ಥಿಕ ವರ್ಷದಲ್ಲಿ ₹5,600 ಕೋಟಿ ಆಸ್ತಿ ತೆರಿಗೆ ವಸೂಲಿಗೆ ನಿರ್ಧರಿಸಿದೆ.

 ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡುವ ಒನ್‌ ಟೈಮ್‌ ಸೆಟಲ್ಮೆಂಟ್‌ (ಒಟಿಎಸ್‌) ಯೋಜನೆ ಜಾರಿಗೆ ತಂದರೂ ನಿಗದಿತ ₹5,210 ಕೋಟಿ ತಲುಪಲು ಸಾಧ್ಯವಾಗದ ಬಿಬಿಎಂಪಿ ಇದೀಗ ಮುಂದಿನ ಆರ್ಥಿಕ ವರ್ಷದಲ್ಲಿ ₹5,600 ಕೋಟಿ ಆಸ್ತಿ ತೆರಿಗೆ ವಸೂಲಿಗೆ ನಿರ್ಧರಿಸಿದೆ.

ಒಟಿಎಸ್‌ ಯೋಜನೆಯಡಿ ಎರಡು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರು ಇಂದಿಗೂ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ, ಹೀಗಾಗಿ ಪಾಲಿಕೆ ಆಸ್ತಿ ತೆರಿಗೆ ಸುಸ್ತಿದಾರರ ಸ್ಥಿರಾಸ್ತಿಗಳನ್ನು ಸೀಜ್‌ ಮಾಡುವ ಜೊತೆಗೆ ಹರಾಜು ಹಾಕಲು ಕ್ರಮ ಕೈಗೊಂಡಿದೆ. ಇಷ್ಟಾದರೂ ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಹಾಕಿಕೊಂಡು ₹5,210 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದರೆ ಮುಂಬರುವ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ ₹400 ಕೋಟಿ ಸೇರಿಸಿಕೊಂಡು ₹5,600 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹಾಕಿಕೊಳ್ಳುತ್ತಿದೆ.

2025-26ನೇ ಸಾಲಿನ ಬಜೆಟ್‌ನಲ್ಲಿ ₹5,600 ಕೋಟಿ ಸಂಗ್ರಹಿಸಲು ಬೆಸ್ಕಾಂ ಮೂಲಕ ವಾಣಿಜ್ಯ ಕಟ್ಟಡಗಳ ಮಾಹಿತಿ ಪಡೆದುಕೊಳ್ಳಲು ಮುಂದಾಗಿದೆ. ಬೆಸ್ಕಾಂನಿಂದ ವಾಣಿಜ್ಯ ಪರವಾನಗಿ ಪಡೆದುಕೊಂಡ ಮಾಲೀಕರು ವಸತಿ ಕಟ್ಟಡ ಎಂದು ನಮೂದಿಸಿ ಆಸ್ತಿ ತೆರಿಗೆ ಕಡಿಮೆ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ನಿಂದ ಅಂಕಿ ಅಂಶ ಪಡೆದುಕೊಂಡು ತೆರಿಗೆ ವಸೂಲಿ ಮಾಡಲಾಗುವುದು. ಜತೆಗೆ ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದ 2-3 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು ಎಂದು ಹಿರಿಯ ಅಧಿರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ₹1 ಸಾವಿರ ಕೋಟಿ ನಿರೀಕ್ಷೆ:

ಮುಂದಿನ ವರ್ಷ ಬೆಸ್ಕಾಂನಿಂದ ಪಡೆದ ಮಾಹಿತಿ ಆಧರಿಸಿ ಹಾಗೂ ಹೊಸ ಆಸ್ತಿಗಳಿಂದ ಸುಮಾರು ಒಂದು ಸಾವಿರ ಕೋಟಿ ರು. ವರೆಗೆ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹಿಸಬಹುದಾಗಿದೆ. ಇದರಿಂದಾಗಿ ₹5600 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಸೀಜ್‌, ಹರಾಜಿನಿಂದ  ₹1 ಸಾವಿರ ಕೋಟಿ

2024-25ನೇ ಸಾಲಿನಲ್ಲಿ ಓಟಿಎಸ್‌ ಯೋಜನೆ, ಶೇ. 5ರಷ್ಟು ರಿಯಾಯಿತಿ ಹಾಗೂ ಸುಸ್ತಿದಾರರ ಸುಮಾರು 9 ಸಾವಿರ ಆಸ್ತಿಗಳನ್ನು ಸೀಜ್‌,, 83 ಸಾವಿರ ಆಸ್ತಿ ಮಾಲೀಕರ ಬ್ಯಾಂಕ್‌ ಖಾತೆಯನ್ನು ಬಿಬಿಎಂಪಿಯ ಖಾತೆಗೆ ಅಟ್ಯಾಚ್‌ ಮಾಡಲಾಗಿದೆ. 600ಕ್ಕೂ ಅಧಿಕ ಆಸ್ತಿಗಳನ್ನು ಹರಾಜಿಗೂ ಕ್ರಮ ಕೈಗೊಂಡಿತ್ತು. ಕಳೆದ ಫೆಬ್ರವರಿ ಅಂತ್ಯಕ್ಕೆ ಸುಮಾರು ₹3500 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಿತ್ತು. ಈ ವರ್ಷ ₹4500 ಕೋಟಿ ವಸೂಲಿ ಆಗಿದೆ.

ಗುರಿ ಸಾಧನೆ ವಿಫಲ

ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಒಂದೇ ಒಂದು ಬಾರಿಯೂ ಸಾಧಿಸಿಲ್ಲ. ಇದು 2024-25ನೇ ಸಾಲಿನಲ್ಲಿಯೂ ಮುಂದುವರೆಯುವ ನಿರೀಕ್ಷೆ ಇದೆ. ಪ್ರಸಕ್ತ ವರ್ಷದ ಗುರಿ ಸಾಧನೆ ಇನ್ನೂ 720 ಕೋಟಿ ರು. ಅಗತ್ಯವಿದೆ. 30 ದಿನದಲ್ಲಿ ಆ ಪ್ರಮಾಣದ ತೆರಿಗೆ ಸಂಗ್ರಹ ಅಸಾಧ್ಯ ಎನ್ನಲಾಗುತ್ತಿದೆ.

ಈ ಹಿಂದಿನ ವರ್ಷಗಳ ಆಸ್ತಿ ತೆರಿಗೆ ವಸೂಲಿ ವಿವರ

ವರ್ಷ ಗುರಿ ಸಂಗ್ರಹ

2018-19 3100 2529

2019-20 3500 2659

2020-21 3500 2860

2021-22 4000 3089

2022-23 4189 3332

2023-24 4412 3900

2024-25 5210 4500 (ಫೆ.26)

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''