ಖಾಸಗಿ ಆಸ್ಪತ್ರೆ ಸುಲಿಗೆ ವಿರುದ್ಧ ಎಂಆರ್ಪಿ ಅಸ್ತ್ರ

Published : Oct 11, 2026, 05:57 AM IST
hospitals

ಸಾರಾಂಶ

ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಭಾರೀ ಪ್ರಮಾಣದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ಆಸ್ಪತ್ರೆಗಳ ಬಿಲ್‌ನಲ್ಲಿ ಔಷಧಿಗಳ ಮೂಲ ಬೆಲೆ, ಲ್ಯಾಂಡಿಂಗ್‌ ದರ ಮತ್ತು ಗರಿಷ್ಠ ಮಾರಾಟ ದರ (ಎಂಆರ್‌ಪಿ) ವಿವರ ನಮೂದು ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ.

ಬೆಂಗಳೂರು : ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಭಾರೀ ಪ್ರಮಾಣದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ಆಸ್ಪತ್ರೆಗಳ ಬಿಲ್‌ನಲ್ಲಿ ಔಷಧಿಗಳ ಮೂಲ ಬೆಲೆ, ಲ್ಯಾಂಡಿಂಗ್‌ ದರ ಮತ್ತು ಗರಿಷ್ಠ ಮಾರಾಟ ದರ (ಎಂಆರ್‌ಪಿ) ವಿವರ ನಮೂದು ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಈ ಕುರಿತು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನ.1ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.

ಈ ಬಗ್ಗೆ ಅ.1 ರಂದು ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಸೂಚನೆ

ಈ ಬಗ್ಗೆ ಅ.1 ರಂದು ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ನ.1 ರಿಂದ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಲಾಗಿದೆ. ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಡೇ ಕೇರ್‌ ಸೆಂಟರ್‌ಗಳು ಹಾಗೂ ಡಯಾಗ್ನಸ್ಟಿಕ್‌ ಸೆಂಟರ್‌ಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಔಷಧಿಗಳ ಬೆಲೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ತಡೆಯುವುದು ಇದರ ಉದ್ದೇಶ. ಆಸ್ಪತ್ರೆಗಳು ಔಷಧಿಗಳ ಬಿಲ್‌ನಲ್ಲಿ ಮೂಲ ಬೆಲೆ, ಲ್ಯಾಂಡಿಂಗ್‌ ಕಾಸ್ಟ್‌ ಹಾಗೂ ಎಂಆರ್‌ಪಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಅಲ್ಲದೆ, ಮೂರು ವರ್ಷಗಳವರೆಗೆ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಪ್ರತಿ ಔಷಧಿಯ ವಿವರಗಳೂ ಬಿಲ್‌ನಲ್ಲಿ ಸ್ಪಷ್ಟವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

ಔಷಧಿಗಳ ಜನರಿಕ್‌ ಹೆಸರು, ಬ್ರ್ಯಾಂಡ್‌, ಬ್ಯಾಚ್‌ ಸಂಖ್ಯೆ, ಉತ್ಪಾದನಾ ದಿನಾಂಕ ಮತ್ತು ಗಡುವು ಮುಗಿಯುವ ದಿನಾಂಕದ ವಿವರಗಳನ್ನೂ ನಮೂದಿಸಬೇಕು. ಔಷಧಿಗಳ ಬೆಲೆಯನ್ನು ಆಸ್ಪತ್ರೆಯ ಮುಖ್ಯದ್ವಾರ ಅಥವಾ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ನಿಗದಿಪಡಿಸಿರುವ ಬೆಲೆ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುವುದು ಅಥವಾ ನಿಗದಿತ ಬೆಲೆಗಿಂತ ಅಧಿಕ ದರದಲ್ಲಿ ಔಷಧಿ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಮಾರ್ಗಸೂಚಿ ಏಕೆ?

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಔಷಧಗಳ ಹೆಸರಲ್ಲಿ ಭಾರೀ ಹಣ ವಸೂಲಿ

ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಇದರನ್ವಯ ಔಷಧದ ಮೂಲ, ಲ್ಯಾಂಡಿಂಗ್‌, ಗರಿಷ್ಠ ಮಾರಾಟ ದರ ನಮೂದು ಕಡ್ಡಾಯ

ಇದರಿಂದಾಗಿ ಔಷಧಗಳ ಮೂಲ ದರ ಏನು, ಆಸ್ಪತ್ರೆಯಲ್ಲಿ ಎಷ್ಟು ದರ ಎಂಬ ಮಾಹಿತಿ

ಹೆಚ್ಚಿನ ದರ ವಸೂಲಿ ಮಾಡುವ ಆಸ್ಪತ್ರೆ, ಡಯಾಗ್ನಸ್ಟಿಕ್‌ ಕೇಂದ್ರಗಳ ವಿರುದ್ಧ ಕ್ರಮ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ ತನಿಖೆಗೆ ಇ.ಡಿ. ಲಗ್ಗೆ
ವಿಶ್ವವೇ ಭಾರತದತ್ತ ತಿರುಗಿ ನೋಡುವ ಅಭಿವೃದ್ಧಿ: ನಾರಾಯಣಸ್ವಾಮಿ