ಮದ್ಯದಂಗಡಿಗಳಲ್ಲಿ ನೋ ಸ್ಟಾಕ್‌ ಫಲಕ -ದುಬಾರಿ ಮದ್ಯದ ಬೆಲೆ ಇಳಿಕೆ ಬೆನ್ನಲ್ಲೇ ದಾಸ್ತಾನು ಕೊರತೆ

Published : Sep 03, 2024, 07:51 AM IST
How much liquor can be legally kept

ಸಾರಾಂಶ

ಇತ್ತೀಚೆಗೆ ದುಬಾರಿ ಮದ್ಯಗಳ ಬೆಲೆಯನ್ನು ಸರ್ಕಾರ ಕೊಂಚ ಕಡಿಮೆ ಮಾಡಿದ್ದರೂ ಮದ್ಯದಂಗಡಿಗಳಲ್ಲಿ ಸ್ಟಾಕ್‌ ಕೊರತೆ ಕಂಡುಬಂದಿದೆ. ಬೆಲೆ ಇಳಿಕೆಯಾಗಿದ್ದರಿಂದ ಲೇಬಲಿಂಗ್‌ ಮಾಡುವ ಕಾರ್ಯಕ್ಕೆ ಸಮಯಾವಕಾಶ ಬೇಕಿರುವುದು ಇದಕ್ಕೆ ಕಾರಣವಾಗಿದೆ.

ಬೆಂಗಳೂರು :  ಇತ್ತೀಚೆಗೆ ದುಬಾರಿ ಮದ್ಯಗಳ ಬೆಲೆಯನ್ನು ಸರ್ಕಾರ ಕೊಂಚ ಕಡಿಮೆ ಮಾಡಿದ್ದರೂ ಮದ್ಯದಂಗಡಿಗಳಲ್ಲಿ ಸ್ಟಾಕ್‌ ಕೊರತೆ ಕಂಡುಬಂದಿದೆ. ಬೆಲೆ ಇಳಿಕೆಯಾಗಿದ್ದರಿಂದ ಲೇಬಲಿಂಗ್‌ ಮಾಡುವ ಕಾರ್ಯಕ್ಕೆ ಸಮಯಾವಕಾಶ ಬೇಕಿರುವುದು ಇದಕ್ಕೆ ಕಾರಣವಾಗಿದೆ.

ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದುಬಾರಿ ದರದ ಮದ್ಯಗಳ ದರವನ್ನು ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ದರದಂತೆ ಲೇಬಲ್‌ ಮುದ್ರಿಸಬೇಕಿದ್ದು ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ಮಾರಾಟಗಾರರಿಗೆ ಕೆಲ ಬ್ರ್ಯಾಂಡ್‌ಗಳ ಮದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವೈನ್ಸ್‌, ಬಾರ್‌ ಸೇರಿದಂತೆ ಮದ್ಯದಂಗಡಿಗಳಲ್ಲಿ ಮಾರಾಟ ಕಡಿಮೆಯಾಗಿದ್ದು ಅಬಕಾರಿ ಆದಾಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ.

‘ಬ್ಲ್ಯಾಕ್‌ ಅಂಡ್‌ ವೈಟ್‌, ಬ್ಲ್ಯಾಕ್‌ ಡಾಗ್‌, ಟೀಚರ್ಸ್‌, ಬ್ಲ್ಯಾಕ್‌ ಲೇಬಲ್‌, ಶಿವಾಸ್‌ ರೀಗಲ್‌, ಸ್ವಿರ್ನಾಫ್‌ ವೋಡ್ಕಾ ಸೇರಿದಂತೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂನ ಹಲವು ಬ್ರ್ಯಾಂಡ್‌ಗಳ ಮದ್ಯ ಸರಿಯಾಗಿ ಸರಬರಾಜಾಗುತ್ತಿಲ್ಲ’ ಎಂದು ಮದ್ಯ ಮಾರಾಟಗಾರರು ಆರೋಪಿಸಿದ್ದಾರೆ. ‘ಸಮಸ್ಯೆ ಗಮನಕ್ಕೆ ಬಂದಿದ್ದು ಎರಡ್ಮೂರು ದಿನದಲ್ಲಿ ಪರಿಹಾರವಾಗಲಿದೆ’ ಎಂದು ಅಬಕಾರಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು