ಅಂಗಾಂಗ ದಾನಕ್ಕೆ ಆನ್‌ಲೈನ್‌ ನೋಂದಣಿ: ಕರ್ನಾಟಕ ನಂ.3

Published : Nov 29, 2025, 10:19 AM IST
 Organ Donate

ಸಾರಾಂಶ

ಅಂಗಾಂಗ ದಾನಕ್ಕೆ ದೇಶದಲ್ಲೇ ಅತಿ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ 52,304 ಮಂದಿ ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ. ಮೊದಲ 2 ಸ್ಥಾನಗಳಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನ ಇವೆ.

ನವದೆಹಲಿ: ಅಂಗಾಂಗ ದಾನಕ್ಕೆ ದೇಶದಲ್ಲೇ ಅತಿ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ 52,304 ಮಂದಿ ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ. ಮೊದಲ 2 ಸ್ಥಾನಗಳಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನ ಇವೆ.

2023ರಲ್ಲಿ ಅಂಗಾಂಗ ದಾನದ ನೋಂದಣಿ ಡಿಜಿಟಲ್‌ ಆರ್ಗನ್‌-ಡೊನೇಷನ್‌ ರಿಜಿಸ್ಟ್ರಿ ಜಾರಿಗೆ ತರಲಾಗಿತ್ತು. ಇದು ಜಾರಿಗೆ ಬಂದ ನಂತರ ದೇಶದಲ್ಲಿ ರಿಜಿಸ್ಟ್ರಿಯಡಿ 4.5 ಲಕ್ಷ ಮಂದಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ.

ನ್ಯಾಷನಲ್‌ ಆರ್ಗನ್‌ ಆ್ಯಂಡ್‌ ಟಿಶ್ಯೂ ಟ್ರಾನ್ಸ್‌ಪ್ಲಾಂಟ್‌ ಆರ್ಗನೈಸೇಷನ್‌(ಎನ್‌ಒಟಿಟಿಒ) ಅಂಕಿ-ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಂದಿ ಅಂದರೆ 1,11,815 ಮಂದಿ ಅಂಗಾಂಗ ದಾನ ನೀಡಲು ಆನ್‌ಲೈನ್‌ ಮೂಲಕ ಒಪ್ಪಿಗೆ ನೀಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 91,043 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ.

ಯಾವ ಅಂಗಾಂಗ ಹೆಚ್ಚು ನೋಂದಣಿ?:

ಲಿವರ್‌ (3,14,475), ಹೃದಯ (3,13,449), ಲಂಗ್ಸ್‌ (2,87,632), ಕರುಳು (2,70,802), ಮೇದೋಜ್ಜೀರಕ ಗ್ರಂಥಿ (2,73,134) ಮತ್ತು 1,22,554 ಲಕ್ಷದಷ್ಟು ಮಂದಿ ಕಿಡ್ನಿದಾನಕ್ಕಾಗಿ ಹೆಸರು ನೋಂದಾಯಿಸಿದ್ದಾರೆ.

ಟಾಪ್‌ 5 ರಾಜ್ಯಗಳು

ರ್‍ಯಾಂಕ್‌ ರಾಜ್ಯ ನೋಂದಣಿ (2023ರ ನಂತರ)

1 ಮಹಾರಾಷ್ಟ್ರ 1,11,815

2 ರಾಜಸ್ಥಾನ 91,043

3 ಕರ್ನಾಟಕ 52,304

4 ಗುಜರಾತ್‌ 41,400

5 ಮಧ್ಯಪ್ರದೇಶ 24,215

ಎನ್‌ಒಟಿಟಿಒ ನಿರ್ದೇಶಕ ಡಾ.ಅನಿಲ್‌ ಕುಮಾರ್‌ ಪ್ರಕಾರ 30-35 ವಯೋಮಾನದವರು 1.56 ಲಕ್ಷದಷ್ಟು ಮಂದಿ, 18-30 ವರ್ಷದ ನಡುವಿನವರು 1.35 ಲಕ್ಷ ಮಂದಿ ಅಂಗಾಂಗ ದಾನಕ್ಕೆ ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಸಿದ್ದಾರೆ.

ಇನ್ನು ಅಂಗಾಂಗ ದಾನದ ವಿಚಾರದಲ್ಲಿ ಗಂಡು-ಹೆಣ್ಣು ನಡುವಿನ ಅನುಪಾತವೂ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಹಿಂದೆ ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದೆ ಬರುತ್ತಿದ್ದರು. ಇದೀಗ ದೇಶದಲ್ಲಿ ಒಟ್ಟಾರೆ 2,44 ಲಕ್ಷ ಪುರುಷರು, 2.07 ಲಕ್ಷದಷ್ಟು ಮಹಿಳೆಯರೂ ತಮ್ಮ ಹೆಸರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ.

ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಿದಾಕ್ಷಣ ಎಲ್ಲರ ಅಂಗಾಂಗವೂ ಕಸಿಗೆ ಯೋಗ್ಯ ಎಂದು ಭಾವಿಸುವಂತಿಲ್ಲ. ಸಹಜ ಸಾವು ಸಂಭವಿಸಿದಾಗ ಚರ್ಮ ಮತ್ತು ಮೂಳೆಯನ್ನು ದೇಹದಿಂದ ತೆಗೆಯಬಹುದು. ಹೃದಯ ಮತ್ತಿತರ ಅಂಗಾಂಗಗಳನ್ನು ಬ್ರೈನ್‌ ಡೆಡ್‌ ಆದಾಗ ತೆಗೆಯಬಹುದಾಗಿದೆ. ಅಂಗಾಂಗ ದಾನಕ್ಕೆ ನೋಂದಣಿ ಮಾಡುವವರ ಹೆಸರನ್ನು ಆಧಾರ್‌ ಲಿಂಕ್‌ ಮಾಡಿರುವ ಕಾರಣ ಸುಲಭವಾಗಿ ಲೆಕ್ಕ ಇಡುವುದು ಸಾಧ್ಯವಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ