ಪಹಲ್ಗಾಂ: ಮೃತ ರಾವ್‌ ಕುಟುಂಬಕ್ಕೆ ಅಸ್ಸಾಂ ಸರ್ಕಾರದಿಂದ ₹5 ಲಕ್ಷ

Published : May 26, 2025, 07:42 AM IST
Assam Govt

ಸಾರಾಂಶ

ಪಹಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಇಲ್ಲಿನ ವಿಜಯನಗರದ ನಿವಾಸಿ ಮಂಜುನಾಥ್ ರಾವ್ ಅವರ ಮನೆಗೆ ಭಾನುವಾರ ಅಸ್ಸಾಂ ರಾಜ್ಯದ ಕೈಗಾರಿಕಾ ಸಚಿವ ಬಿಮಲ್ ಬೋರಾ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

 ಶಿವಮೊಗ್ಗ : ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಇಲ್ಲಿನ ವಿಜಯನಗರದ ನಿವಾಸಿ ಮಂಜುನಾಥ್ ರಾವ್ ಅವರ ಮನೆಗೆ ಭಾನುವಾರ ಅಸ್ಸಾಂ ರಾಜ್ಯದ ಕೈಗಾರಿಕಾ ಸಚಿವ ಬಿಮಲ್ ಬೋರಾ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

ಈ ವೇಳೆ, ರಾವ್‌ರ ಪತ್ನಿ ಆರ್.ಪಲ್ಲವಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಅವರ ಆದೇಶದ ಮೇರೆಗೆ ಸರ್ಕಾರದ ಸಾಂತ್ವನ ಪತ್ರ ಮತ್ತು ಸರ್ಕಾರದಿಂದ 5 ಲಕ್ಷ ರು.ನೆರವಿನ ಚೆಕ್‌ ಅನ್ನು ಹಸ್ತಾಂತರಿಸಿದರು.

ಈ ವೇಳೆ, ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿಯವರು ಅಂದು ಪಹಲ್ಗಾಂನಲ್ಲಿ ನಡೆದ ದುರ್ಘಟನೆಯನ್ನು ಸಚಿವರಿಗೆ ವಿವರಿಸಿದರು. ಅಂದು ನಡೆದ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ಕಷ್ಟ ಕಾಲದಲ್ಲಿ ಸಾಕಷ್ಟು ಮಂದಿ ನಮ್ಮ ಕುಟುಂಬಕ್ಕೆ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. 

PREV
Read more Articles on

Recommended Stories

ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ
ಕಬ್ಬನ್‌ಪಾರ್ಕ್‌ನಿಂದ ರೇಸ್ ಕೋರ್ಸ್‌ಗೆ ಕರ್ನಾಟಕ ಹೈಕೋರ್ಟ್ ಸ್ಥಳಾಂತರ ?