ಜನರು ಸಾಯುವುದಕ್ಕೂ ದುಡ್ಡು ಕೊಡವ ಪರಿಸ್ಥಿತಿ - ಸಂಪೂರ್ಣ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿದ ‘ಕೈ’: ಸಚಿವ

Published : Feb 27, 2025, 09:59 AM IST
Prahlad Joshi

ಸಾರಾಂಶ

ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು  ಪ್ರ​ಹ್ಲಾದ ಜೋಶಿ ಲೇ​ವಡಿ ಮಾ​ಡಿ​ದ​ರು.

 ಹು​ಬ್ಬ​ಳ್ಳಿ : ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು ಕೇಂದ್ರ ಸ​ಚಿವ ಪ್ರ​ಹ್ಲಾದ ಜೋಶಿ ಲೇ​ವಡಿ ಮಾ​ಡಿ​ದ​ರು.

ಸು​ದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿದ ಅ​ವರು, ರಾಜ್ಯ ಸರ್ಕಾರ ಗ್ಯಾ​ರಂಟಿ ಯೋ​ಜ​ನೆಯ ಹೆ​ಸ​ರಿ​ನಲ್ಲಿ ಜನರ ಜೀವನವನ್ನೇ ದುಬಾರಿ ಮಾಡಿದೆ. ಅ​ಗತ್ಯ ವ​ಸ್ತು​ಗಳು ಹಾಗೂ ವಿ​ದ್ಯುತ್‌ ಸೇ​ರಿ ಎಲ್ಲ ವಸ್ತಗಳ ದ​ರ ಏ​ರಿಕೆ ಮಾ​ಡುತ್ತಿದೆ. ರೈ​ತ​ರಿಗೆ ಸ​ಮ​ರ್ಪಕ ವಿ​ದ್ಯುತ್‌ ಪೂ​ರೈಕೆ ಸಹ ಮಾ​ಡು​ತ್ತಿಲ್ಲ ಎಂದು ಆ​ರೋ​ಪಿ​ಸಿ​ದ​ರು.

ಬೆಂಗಳೂರಿಗೆ ಅ​ಗ​ತ್ಯ​ವಿ​ರುವ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆಗಲ್ಲ ಅಂತ ಉಪಮುಖ್ಯಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಹೇ​ಳಿಕೆ ನೀ​ಡಿ​ದ್ದಾರೆ. ಜ​ತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್‌ ಮಾಡಿದ ಉದ್ಯಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಪಮಾನ ಮಾಡಿದ್ದಾರೆ. ಉದ್ಯಮಿ ಮೋಹನ್‌ ದಾಸ್‌ ಪೈ ಟ್ವೀಟ್‌ಗೆ ಸ​ಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಉತ್ತರಿಸಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಬೇಕು. ಬಹಳ ದುರಹಂಕಾರಿ ವರ್ತನೆ ಸರಿ ಅಲ್ಲ ಎಂದು ಸ​ಚಿವ ಜೋಶಿ ಎ​ಚ್ಚ​ರಿ​ಸಿ​ದ್ದಾ​ರೆ.

ಬೆ​ಳ​ಗಾ​ವಿ​ಯಲ್ಲಿ ಕಂಡ​ಕ್ಟರ್‌ ಮೇಲೆ ನ​ಡೆದ ಹಲ್ಲೆ ಪ್ರ​ಕ​ರ​ಣ ಸಂಬಂಧ ಮಾತನಾಡಿ, ನೆ​ಪ​ದಲ್ಲಿ ಎ​ರಡೂ ರಾ​ಜ್ಯ​ಗಳ ಬಸ್‌ ಸಂಚಾರ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ. ಇ​ದ​ರಿಂದ ಪ್ರ​ಯಾ​ಣಿ​ಕ​ರಿಗೆ ಬ​ಹ​ಳಷ್ಟು ಸ​ಮಸ್ಯೆಯಾಗುತ್ತಿದೆ. ಎರಡೂ ರಾಜ್ಯಗಳ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಂಡಕ್ಟರ್‌ ಮೇಲಿ​ನ ಹಲ್ಲೆ ಪ್ರಕರಣ ಅಕ್ಷಮ್ಯ ಅಪರಾಧ. ಹಲ್ಲೆಕೋ​ರರ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಇ​ದಕ್ಕೆ ನಮ್ಮ ಬೆಂಬ​ಲ​ವಿ​ದೆ. ಆ​ದರೆ, ಅದೇ ಕಾ​ರ​ಣಕ್ಕೆ ಎ​ರಡೂ ರಾ​ಜ್ಯ​ಗಳ ಮಧ್ಯ ಬಸ್‌ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ ಎಂದ​ರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ
ಅಭಿವೃದ್ಧಿ ಪಥದತ್ತ ದೇವನಹಳ್ಳಿ ತಾಲೂಕು