ಪ್ರಜ್ವಲ್‌ ಕೇಸ್‌: ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ-ವಿಜಯೇಂದ್ರ

ಸಾರಾಂಶ

ಏನೇ ಆದರೂ ಬಿಜೆಪಿ ಮೇಲೆ ಹಾಕುವುದು ಕಾಂಗ್ರೆಸ್‌ನವರ ಚಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ನಗರದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಹುಬ್ಬಳ್ಳಿ: ಏನೇ ಆದರೂ ಬಿಜೆಪಿ ಮೇಲೆ ಹಾಕುವುದು ಕಾಂಗ್ರೆಸ್‌ನವರ ಚಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ನಗರದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. 

ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದರು. ಬಿಜೆಪಿ, ಮೋದಿಯನ್ನು ಹೊಣೆ ಮಾಡುವುದು ಕಾಂಗ್ರೆಸ್‌ನವರ ಚಟ. 

ಪ್ರಜ್ಚಲ್‌ ವಿಚಾರದಲ್ಲಿ ಬಿಜೆಪಿ, ಮೋದಿ ಮೇಲೆ ಆರೋಪ ಮಾಡುವುದು ಸರಿ‌ಯಲ್ಲ. ಕಾಂಗ್ರೆಸ್‌ನವರಿಗೆ ಇದು ಶೋಭೆ ತರುವುದಿಲ್ಲ. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

Share this article