ಮಾಸಾಂತ್ಯಕ್ಕ 110 ಔಷಧಗಳ ಬೆಲೆ ಇಳಿಕೆ

Published : Oct 09, 2026, 10:34 AM IST
medicine

ಸಾರಾಂಶ

ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಎಲ್ಲಾ ಕ್ಯಾನ್ಸರ್‌ ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ರಾಂಡೆಡ್‌, ಜೆನೆರಿಕ್‌, ದೇಶೀಯವಾಗಿ ಉತ್ಪಾದಿಸಲಾಗುವ, ಆಮದು ಮಾಡಿಕೊಳ್ಳುವ, ಪೇಟೆಂಟ್‌ ಹೊಂದಿರುವ ಮತ್ತು ಪೇಟೆಂಟ್‌ ಇಲ್ಲದ ಔಷಧಗಳಿಗೆ ಇದು ಅನ್ವಯಿಸಲಿದೆ.

ನವದೆಹಲಿ: ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಎಲ್ಲಾ ಕ್ಯಾನ್ಸರ್‌ ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ರಾಂಡೆಡ್‌, ಜೆನೆರಿಕ್‌, ದೇಶೀಯವಾಗಿ ಉತ್ಪಾದಿಸಲಾಗುವ, ಆಮದು ಮಾಡಿಕೊಳ್ಳುವ, ಪೇಟೆಂಟ್‌ ಹೊಂದಿರುವ ಮತ್ತು ಪೇಟೆಂಟ್‌ ಇಲ್ಲದ ಔಷಧಗಳಿಗೆ ಇದು ಅನ್ವಯಿಸಲಿದೆ.

ಇದೇ ಮಾಸಾಂತ್ಯದಲ್ಲಿ ಜಾರಿಗೆ ಬರುವ ನಿರೀಕ್ಷೆ

ಈ ಆದೇಶವು ಇದೇ ಮಾಸಾಂತ್ಯದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದ್ದು, 35 ಪೇಟೆಂಟ್‌ ಔಷಧಗಳು ಸೇರಿದಂತೆ ಒಟ್ಟು 110 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕ್ರಮದಿಂದ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕ ₹2,500 ಕೋಟಿ ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಉದ್ದೇಶ

ವ್ಯಾಪಾರ ಮಾರ್ಜಿನ್ ಎಂದರೆ ಔಷಧ ತಯಾರಕರು ನಿಗದಿಪಡಿಸಿದ ಬೆಲೆ ಮತ್ತು ಔಷಧವನ್ನು ಮಾರಾಟ ಮಾಡುವಾಗ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಪಡೆಯುವ ಲಾಭದ ಅಂತರ. ಇದನ್ನು ನಿಯಂತ್ರಿಸುವ ಮೂಲಕ ಜೀವ ರಕ್ಷಕ ಕ್ಯಾನ್ಸರ್‌ ಔಷಧಗಳನ್ನು ಜನರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹು- ಧಾ ನಡುವೆ ಭಾರತದ ಮೊದಲ ಆಧುನಿಕ ಟ್ರ್ಯಾಮ್‌?
80 ಪ್ರಶ್ನೆಗಳ ಬಳಸಿ ಸಾಹುಕಾರ್‌, ಗೀತಾ, ಕನ್ನಾಳೆ ಕೆಪಿಎಸ್ಸಿ ಡೀಲ್‌