ವಿಚಿತ್ರವಾಗಿ ಡೆತ್‌ನೋಟ್‌ ಬರೆದು ಅರ್ಚಕನ ಪುತ್ರ ನೇ*ಗೆ ಶರಣು

Published : Sep 25, 2025, 01:13 PM IST
Belagavi crime news

ಸಾರಾಂಶ

ಕಪಿಲೇಶ್ವರ ದೇವಸ್ಥಾನದವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನೊಂದು ಅರ್ಚಕರೊಬ್ಬರ ಮಗ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಡೆದಿದೆ.

ಬೆಳಗಾವಿ: ಕಪಿಲೇಶ್ವರ ದೇವಸ್ಥಾನದವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನೊಂದು ಅರ್ಚಕರೊಬ್ಬರ ಮಗ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಡೆದಿದೆ.

ಸಿದ್ದಾಂತ ಪೂಜಾರಿ (27) ಆತ್ಮ*ತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ವಿಚಿತ್ರವಾಗಿ ಡೆತ್‌ನೋಟ್‌ ಬರೆದಿಟ್ಟಿದ್ದಾನೆ. ಮೂರು ವರ್ಷದ ಹಿಂದೆ ರೇ* ಕೇಸ್ ಹಾಕಿ ದೇವಸ್ಥಾನದಿಂದ ನನ್ನನ್ನು ಹೊರ ಹಾಕಿದರು. ಅಲ್ಲಿಂದ ನನ್ನ ಜೀವನ ಹಾಳಾಗುತ್ತ ಹೋಯಿತು. ಸತ್ತು ನಾನು ಮೇಲೆ ಹೋದಾಗ ದೇವರು ಸಿಕ್ಕರೆ ನನಗೆ ಕಿರುಕುಳ ಕೊಟ್ಟವರನ್ನು ಹೊಡೆಯಲು ಹೇಳುತ್ತೇನೆ. ದೇವರ ಕಡೆಯಿಂದ ಅವರಿಗೆ ಹೊಡೆಸುತ್ತೇನೆ. ಅಜ್ಜಿ ಸತ್ತಾಗ ಮಟನ್ ಮಾಡಿದ್ದಿರಿ. ಈಗ ನನ್ನ ತಿಥಿ ವೇಳೆ ಮಟನ್ ಮಾಡಬೇಡಿ. ಅದನ್ನು ಬಿಟ್ಟು ಏನು ಬೇಕಾದರೂ ತಿನ್ನಲು ಮಾಡಿ. ಯಾರು ಅಳುವುದು ಬೇಡ. ನೀವು ಅತ್ತರೆ ನನ್ನ ಆತ್ಮಕ್ಕೆ ತ್ರಾಸಾಗುತ್ತದೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.

ನಾನು ಹುಡುಗಿಗಾಗಿ ಸಾಯುತ್ತಿಲ್ಲ. ಅದ್ದೂರಿ ಜೀವನ ಮಾಡಲು ಆಗದೆ ಸಾಯುತ್ತಿದ್ದೇನೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಆತ್ಮ*ತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ, ಜೋರಾಗಿ ಗಣಪತಿ ಹಬ್ಬ ಮಾಡಿ ಸಾಯಬೇಕು ಎಂದು ಮುಂದೂಡಿದ್ದೆ ಎಂದು ಉಲ್ಲೇಖಿಸಿದ್ದಾನೆ.

ತಾಯಿಗೆ ತೊಂದರೆ ಕೊಡದಂತೆ ತಂದೆಗೆ ಹೇಳಿ. ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷದ ಹಿಂದೆ ರೇ* ಕೇಸ್ ಹಾಕಿ ದೇವಸ್ಥಾನದಿಂದ ನನಗೆ ಹೊರ ಹಾಕಿದರು. ಅಲ್ಲಿಂದ ನನ್ನ ಜೀವನ ಹಾಳಾಗುತ್ತ ಹೋಯಿತು. ಇದೆಲ್ಲಾ ನಾನೇ ಬಾಯಲ್ಲಿ ಹೇಳಬೇಕಿತ್ತು. ಆದರೆ ಸತ್ತಿದ್ದೇನೆ ನೀವೇ ಓದಿಕೊಳ್ಳಿ ಎಂದು ಡೆತ್ ನೋಟ್ ಬರೆದು ಸಾಯುತ್ತಿದ್ದೇನೆ‌ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಸ್ಥಳಕ್ಕೆ ಖಡೇಬಜಾರ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.

PREV
Read more Articles on

Recommended Stories

ಆರೋಗ್ಯ ಇಲಾಖೆಯಲ್ಲಿ 100 ಮಂದಿಗೆ ಅನುಕಂಪದ ಆಧಾರದಲ್ಲಿ ನೌಕರಿ
ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ