ಹೊಸಕೋಟೆ: ಪ್ರತಿ ತಾಲೂಕಿಗೊಂದು ರಂಗಮಂದಿರ ನಿರ್ಮಿಸುವ ಮೂಲಕ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕಲಾವಿದರ ಸಂಘದ ಉಪಾಧ್ಯಕ್ಷ ನಟರಾಜ್ ಒತ್ತಾಯಿಸಿದರು
ಹೊಸಕೋಟೆ: ಪ್ರತಿ ತಾಲೂಕಿಗೊಂದು ರಂಗಮಂದಿರ ನಿರ್ಮಿಸುವ ಮೂಲಕ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕಲಾವಿದರ ಸಂಘದ ಉಪಾಧ್ಯಕ್ಷ ನಟರಾಜ್ ಒತ್ತಾಯಿಸಿದರು.
ತಾಲೂಕಿನ ಅತ್ತಿವಟ್ಟ ಗ್ರಾಮದಲ್ಲಿ ಪಟಾಲಮ್ಮ ದೇವಿ ಮಹಿಳಾ ನಾಟಕ ತಂಡ ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಯಲಿನಲ್ಲಿ ವೇದಿಕೆ ಸಿದ್ದಪಡಿಸಿ ರಂಗಭೂಮಿ ನಾಟಕ ಪ್ರದರ್ಶನ ಮಾಡುವುದು ದುಬಾರಿಯಾಗುತ್ತಿರುವುದು ಮತ್ತು ಮಳೆ ಚಳಿ ಗಾಳಿಗಳಿಂದಾಗಿ ಪ್ರದರ್ಶನ ನಿಂತು ಕಲಾವಿದರಿಗೆ ನಷ್ಟ ಮತ್ತು ನಿರಾಸೆ ಹಾಗೂ ಪ್ರೇಕ್ಷಕರಿಗೂ ತೊಂದರೆ ಉಂಟಾಗುತ್ತಿರುವ ಹಿನ್ನೆಲೆ ಪ್ರತಿ ತಾಲೂಕಿಗೆ ಒಂದರಂತೆ ರಂಗಮಂದಿರ ನಿರ್ಮಿಸಿದರೆ ರಂಗಭೂಮಿ ಕಲೆ ಉಳಿಯಲು ಸಹಕಾರಿಯಾಗುತ್ತದೆ ಎಂದರು.ಕುರುಬರ ಸಂಘದ ಮಾಜಿ ನಿರ್ದೇಶಕ ಅತ್ತಿವಟ್ಟ ಕೆ.ನಾಗೇಶ್ ಮಾತನಾಡಿ, ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿದ್ದರೆ ಒಬ್ಬ ಯಶಸ್ವಿ ಮಹಿಳೆಯಿಂದೆ ಒಂದು ಕುಟುಂಬ ಒಂದು ಊರು ಇರುತ್ತದೆ ಅದಕ್ಕೆ ನಮ್ಮ ಗ್ರಾಮದ ಮಹಿಳೆಯರು ಸಾಕ್ಷಿಯಾಗಿದ್ದು ರಂಗಭೂಮಿ ಕಲೆ ಉಳಿಸಿದ್ದಾರೆ, ಆ ನಿಟ್ಟಿನಲ್ಲಿ ಎರಡನೇ ಭಾರಿಗೆ ಕುರುಕ್ಷೇತ್ರ ನಾಟಕ ಪ್ರದರ್ಶನ ಮಾಡಿ ನೆರೆದಿದ್ದ ಸಾವಿರಾರು ಜನರ ಮೆಚ್ಚುಗೆ ಗಳಿಸಿದ್ದು ಅವರಿಗೆ ಮತ್ತಷ್ಟು ಪ್ರೋತ್ಸಾಹ ಅಗತ್ಯವಿದೆ ಎಂದರು.
ಸಹ ನಿರ್ದೇಶಕರಾದ ಮುನಿರಾಜು ಭಾಗವತರು, ಕಲಾವಿದರ ಸಂಘದ ಕಾರ್ಯದರ್ಶಿ ಡಿ ಮಂಜುನಾಥ್, ತಬಲ ವಾದಕರಾದ ಮುರಳಿ, ಸೋಲೆಕ್ಸ್ ವಾದಕರಾದ ಮಧು ಪೋಲಿಸ್, ಗ್ರಾಪಂ ಸದಸ್ಯ ರಮೇಶ್, ಹಿರಿಯ ಕಲಾವಿದ ಲಿಂಗೇಗೌಡ ಹಾಗೂ ಇತರರಿದ್ದರು.ಫೋಟೋ: 25 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕಿನ ಅತ್ತಿವಟ್ಟದಲ್ಲಿ ಮಹಿಳಾ ನಾಟಕ ತಂಡದಿಂದ ನಡೆದ ಕುರುಕ್ಷೇತ್ರ ನಾಟಕದಲ್ಲಿ ನಿರ್ದೇಶಕರಾದ ವೇಣುಗೋಪಾಲ ಮತ್ತು ಇತರ ಅತಿಥಿಗಳು ಹಾಗೂ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.