'ಜೀವ ಜಲ ಕಾಪಾಡುವ ಹೊಣೆ ನಮ್ಮದು, ಸದ್ಯ ಶೇ.4 ರಷ್ಟು ಮಾತ್ರ ಶುದ್ಧ ನೀರು ಲಭ್ಯ '

Published : Nov 29, 2025, 11:50 AM IST
V Somanna

ಸಾರಾಂಶ

ಭಾರತವು ವಿಶ್ವದ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಶೇ.4 ರಷ್ಟು ಮಾತ್ರ ಶುದ್ಧ ನೀರನ್ನು ಹೊಂದಿದೆ. ಈ ಸಂಪನ್ಮೂಲವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

  ಬೆಂಗಳೂರು :  ಭಾರತವು ವಿಶ್ವದ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಶೇ.4 ರಷ್ಟು ಮಾತ್ರ ಶುದ್ಧ ನೀರನ್ನು ಹೊಂದಿದೆ. ಈ ಸಂಪನ್ಮೂಲವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಶುಕ್ರವಾರ ದೆಹಲಿಯ ಭಾರತ ಮಂಟಪಂನಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ‘ಸುಜಲಂ ಭಾರತ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿಕಸಿತ್ ಭಾರತ್@2047’ ಎಂಬ ಪರಿಕಲ್ಪನೆ

ಪ್ರಧಾನಿ ನರೇಂದ್ರ ಮೋದಿ ಅವರು ‘ವಿಕಸಿತ್ ಭಾರತ್@2047’ ಎಂಬ ಪರಿಕಲ್ಪನೆಯೊಂದಿಗೆ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ. ನೀರಿನ ಸಂರಕ್ಷಣೆ, ನೀರಿನ ಭದ್ರತೆ, ಸ್ವಚ್ಛತೆ ಇವುಗಳ ವಿಚಾರವಾಗಿ ಚರ್ಚೆಗೆ ವೇದಿಕೆಯಾಗಿರುವ ಈ ಕಾರ್ಯಗಾರ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೀರು ಒಂದು ಅತ್ಯಮೂಲ್ಯ ಸಂಪನ್ಮೂಲ

ನೀರು ಒಂದು ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, 140 ಕೋಟಿ ಭಾರತೀಯರ ಅಸ್ತಿತ್ವ ಹಾಗೂ ಅಭಿವೃದ್ದಿಯ ಮೂಲವಾಗಿದೆ. ಭಾರತವು ವಿಶ್ವದ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಲಭ್ಯವಿರುವ ಶುದ್ದ ನೀರಿನ ಶೇ.4 ರಷ್ಟನ್ನು ಮಾತ್ರ ಹೊಂದಿದ್ದು, ಈ ಸಂಪನ್ಮೂಲವನ್ನು ಕಾಪಾಡುವ ಜವಾಬ್ದಾರಿ ಹಾಗೂ ಅವಶ್ಯಕತೆಯ ಬಗ್ಗೆ ಸಚಿವರು ವಿವರಿಸಿದರು.

ಏಷಿಯಾದ ಮೊಟ್ಟ ಮೊದಲ ಸಂಪೂರ್ಣ ಸ್ವಯಂಚಾಲಿತ ನೀರಾವರಿ ಯೋಜನೆಯಾದ ನಾರಾಯಣಪುರ ಎಡದಂಡೆ ಕಾಲುವೆ, ಸ್ಕಾಡಾ ಯೋಜನೆ ಮೂಲಕ ಸಾಧಿಸಲಾದ ನೀರಿನ ಮಿತವ್ಯಯ ಮತ್ತು ಕಟ್ಟಕಡೆಯ ಹಂತದವರೆಗೆ ನೀರಿನ ಯಶಸ್ವಿ ಹಂಚಿಕೆ ಹಾಗೂ ಐಹೊಳೆ ದೇವಾಲಯದಲ್ಲಿನ ಪುರಾತನ ಸ್ಟೆಪ್‍ವೆಲ್‍ಗಳಲ್ಲಿ ಬಳಕೆಯಾದ ಉಪಾಯಗಳ ಮೂಲಕ ಯಾವ ರೀತಿ ಕಠಿಣ ಕಲ್ಲು ಪ್ರದೇಶದಲ್ಲಿಯೂ ಸಹ ನೀರಿನ ಸಂರಕ್ಷಣೆ ಸಾಧ್ಯ ಎನ್ನುವುದನ್ನು ಸೋಮಣ್ಣ ಅವರು ಕರ್ನಾಟಕ ರಾಜ್ಯದ ಎರಡು ಪ್ರಮುಖ ಯಶ್ವಸಿ ಪ್ರಯೋಗಗಳ ಉದಾಹರಣೆಯ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಕೇಂದ್ರದ ಜಲಶಕ್ತಿ ರಾಜ್ಯ ಖಾತೆಯ ಸಚಿವ ರಾಜ್ ಭೂಷಣ್ ಚೌದರಿ, ಇಲಾಖೆಯ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಮಿನಾ ಹಾಗೂ ಶ್ರೀಕಾಂತರಾವ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ