25000 ರಾಗಿ ಬೆಳೆಗಾರರ ₹265 ಕೋಟಿ ಬಾಕಿ ಚುಕ್ತಾ

Published : Oct 13, 2026, 07:35 AM IST
millets

ಸಾರಾಂಶ

ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಯ 25,413 ರೈತರಿಗೆ ಕೊನೆಗೂ 265 ಕೋಟಿ ರು. ಅನ್ನು ಸರ್ಕಾರ ಪಾವತಿಸಿದೆ.ಸೋಮವಾರ ಬೆಳಗ್ಗೆಯಿಂದಲೇ ಬಹುತೇಕ ರೈತರಿಗೆ ರಾಗಿ ಬಾಕಿ ಹಣ ಪಾವತಿಯಾಗಿದೆ

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಯ 25,413 ರೈತರಿಗೆ ಕೊನೆಗೂ 265 ಕೋಟಿ ರು. ಅನ್ನು ಸರ್ಕಾರ ಪಾವತಿಸಿದೆ.

ಸೋಮವಾರ ಬೆಳಗ್ಗೆಯಿಂದಲೇ ಬಹುತೇಕ ರೈತರಿಗೆ ರಾಗಿ ಬಾಕಿ ಹಣ ಪಾವತಿಯಾಗಿದೆ. ಏನಾದರೂ ತಾಂತ್ರಿಕ ಸಮಸ್ಯೆ ಇದ್ದವರಿಗೆ ಮಾತ್ರ ಹಣ ಪಾವತಿಯಲ್ಲಿ ಒಂದು ದಿನ ತಡವಾಗಬಹುದಷ್ಟೇ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಗೌರಿ ಗಣೇಶ ಹಬ್ಬಕ್ಕಂತೂ ಹಣ ಬರಲಿಲ್ಲ. ನಾಡಹಬ್ಬ ದಸರಾಕ್ಕಾದರೂ ಹಣ ಪಾವತಿ ಮಾಡಿದ್ದಾರಲ್ಲ ಎಂದು ರೈತರು ನಿಟ್ಟುಸಿರುಬಿಟ್ಟಿದ್ದಾರೆ.

ಎಂಎಸ್‌ಪಿ ಅಡಿ 2025-26ನೇ ಸಾಲಿಗೆ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅನುಮತಿ

ಎಂಎಸ್‌ಪಿ ಅಡಿ 2025-26ನೇ ಸಾಲಿಗೆ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. 15 ಜಿಲ್ಲೆಯ 2,46,605 ರೈತರು ಪ್ರತಿ ಕ್ವಿಂಟಲ್‌ಗೆ 4,886 ರು.ನಂತೆ 2500 ಕೋಟಿ ರು.ಗೂ ಅಧಿಕ ಮೌಲ್ಯದ 5,69,331 ಮೆಟ್ರಿಕ್ ಟನ್ ರಾಗಿಯನ್ನು ನೋಡೆಲ್ ಏಜೆನ್ಸಿಗಳ ಮೂಲಕ ಮಾರಾಟ ಮಾಡಿದ್ದರು. ಇದರಲ್ಲಿ 2.21 ಲಕ್ಷ ರೈತರಿಗೆ ಹಣ ಪಾವತಿಸಿದ್ದು, 14 ಜಿಲ್ಲೆಯ 25,413 ರೈತರಿಗೆ ತಿಂಗಳುಗಳಾದರೂ 265 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿತ್ತು.

ತುಮಕೂರು ಜಿಲ್ಲೆಯ 10,146 ರೈತರಿಗೆ ಬರೋಬ್ಬರಿ 103 ಕೋಟಿ ರು. ಬಾಕಿ

ತುಮಕೂರು ಜಿಲ್ಲೆಯ 10,146 ರೈತರಿಗೆ ಬರೋಬ್ಬರಿ 103 ಕೋಟಿ ರು. ಬಾಕಿ ಪಾವತಿಸಬೇಕಿತ್ತು. ಹಾಸನ ಜಿಲ್ಲೆಯ 5440 ರೈತರಿಗೆ 56 ಕೋಟಿ, ಮೈಸೂರು ಜಿಲ್ಲೆಯ 2648 ರೈತರಿಗೆ 26 ಕೋಟಿ, ಚಿಕ್ಕಮಗಳೂರು ಜಿಲ್ಲೆಯ 2499 ರೈತರಿಗೆ 27 ಕೋಟಿ ರು. ಬಾಕಿ ಇತ್ತು. ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ದಾವಣಗೆರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಒಟ್ಟಾರೆ 14 ಜಿಲ್ಲೆಯ ರೈತರಿಗೆ ರಾಗಿಯ ಹಣ ಪಾವತಿಸಬೇಕಿತ್ತು.

‘ಬರ’ಗಾಲವಿದ್ದರೂ ಹಣ ಪಾವತಿ ವಿಳಂಬ ಆಗುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಹೈಕೋರ್ಟಲ್ಲಿ ರದ್ದು
ನಗರ ಸಮಸ್ಯೆ ಪರಿಹಾರಕ್ಕೆ ಡಿಜಿಟಲ್‌ ಟ್ವಿನ್‌ ಚಿಂತನೆ