ಡಿಕೆಶಿ ಓಡಿಸಿದ್ದ ಸ್ಕೂಟರ್‌ಗಿದ್ದ ₹ 18500 ದಂಡ ಬಾಕಿ ವಸೂಲಿ

Published : Aug 07, 2025, 06:49 AM IST
DK Shivakumar Ride Scooter

ಸಾರಾಂಶ

ಹೆಬ್ಬಾಳ ಮೇಲ್ಸೇತುವೆ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಲಾಯಿಸಿದ್ದ ಸ್ಕೂಟರ್‌ ಮಾಲಿಕನಿಂದ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಾಖಲಾಗಿದ್ದ 34 ಪ್ರಕರಣಗಳಲ್ಲಿ ₹18,500 ದಂಡವನ್ನು ಪೊಲೀಸರು ಬುಧವಾರ ವಸೂಲಿ ಮಾಡಿದ್ದಾರೆ.

  ಬೆಂಗಳೂರು :  ಹೆಬ್ಬಾಳ ಮೇಲ್ಸೇತುವೆ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಲಾಯಿಸಿದ್ದ ಸ್ಕೂಟರ್‌ ಮಾಲಿಕನಿಂದ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಾಖಲಾಗಿದ್ದ 34 ಪ್ರಕರಣಗಳಲ್ಲಿ ₹18,500 ದಂಡವನ್ನು ಪೊಲೀಸರು ಬುಧವಾರ ವಸೂಲಿ ಮಾಡಿದ್ದಾರೆ.

ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡ ಹಿನ್ನಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆಗೆ ಮಂಗಳವಾರ ಭೇಟಿ ಶಿವಕುಮಾರ್ ಪರಿಶೀಲಿಸಿದ್ದರು. ಖುದ್ದು ಸ್ಕೂಟರ್‌ ಚಲಾಯಿಸಿಕೊಂಡು ಅವರು ಸೇತುವೆ ಪರಿಶೀಲನೆ ಮಾಡಿದ್ದರು. ಈ ಸ್ಕೂಟರ್‌ನ ನೋಂದಣಿ ಸಂಖ್ಯೆ ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ವಿರೋಧ ಪಕ್ಷ ಜೆಡಿಎಸ್ ಸಾಮಾಜಿಕ ಜಾಲ ವಿಭಾಗ ಪರಿಶೀಲಿಸಿದೆ. ಆಗ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಆ ಸ್ಕೂಟರ್‌ನ ಮೇಲೆ ₹18,500 ದಂಡ ಬಾಕಿ ಇರುವುದು ಗೊತ್ತಾಗಿದೆ.

ಜೆಡಿಎಸ್ ಒತ್ತಾಯ:

ಈ ಬಗ್ಗೆ ‘ಎಕ್ಸ್’ ತಾಣದಲ್ಲಿ ‘ಶೋಕಿಲಾಲಾ, ರೀಲ್ಸ್‌ ರಾಜಾ ಮಿಸ್ಟರ್‌ ಡಿಸಿಎಂ ಶಿವಕುಮಾರ್‌ ಅವರೇ ಹೆಬ್ಬಾಳ ಫ್ಲೈಓವರ್‌ ಮೇಲೆ ಚಾಲನೆ ಮಾಡಿದ ದ್ವಿಚಕ್ರವಾಹನ ( KA 04 JZ 2087 ) 34ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ದಂಡದ ಮೊತ್ತ ₹18,500 ಬಾಕಿ ಇದೆ. ಪ್ರಚಾರಕ್ಕಾಗಿ ಫೋಟೋ ಶೂಟ್‌, ರೀಲ್ಸ್‌ ಶೋಕಿ ಬಿಟ್ಟು ಮೊದಲು ಸಚಿವ ಸ್ಥಾನದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ದ್ವಿಚಕ್ರವಾಹನದಿಂದ ದಂಡ ವಸೂಲಿ ಮಾಡುವ ಕೆಲಸ ಆಗಲಿ ಎಂದು ಜೆಡಿಎಸ್ ಒತ್ತಾಯಿಸಿತ್ತು.

ಈ ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು, ಸ್ಕೂಟರ್‌ ಮಾಲಿಕನನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ್ದಾರೆ.

PREV
Read more Articles on

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್