ಸೆಪ್ಟೆಂಬರ್‌ ಕ್ರಾಂತಿ ಇನ್ನೂ ದೂರ ಇದೆ, ಆಸಕ್ತಿ ಉಳಿಸಿಕೊಳ್ಳಿ : ರಾಜಣ್ಣ

Published : Jul 07, 2025, 11:58 AM IST
KN Rajanna

ಸಾರಾಂಶ

ಸೆಪ್ಟೆಂಬರ್‌ನಲ್ಲಿ ರಾಜ್ಯದ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಸೆಪ್ಟೆಂಬರ್‌ ಇನ್ನೂ ದೂರ ಇದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

 ಹಾಸನ :  ಸೆಪ್ಟೆಂಬರ್‌ನಲ್ಲಿ ರಾಜ್ಯದ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಸೆಪ್ಟೆಂಬರ್‌ ಇನ್ನೂ ದೂರ ಇದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸೆಪ್ಟೆಂಬರ್‌ ಕ್ರಾಂತಿ ಕುರಿತ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿ, ಸೆಪ್ಟೆಂಬರ್‌ ಇನ್ನೂ ದೂರ ಇದೆ. ಅದೆಲ್ಲವನ್ನು ಈಗಲೇ ಹೇಳಿ ಬಿಟ್ಟರೆ ನಿಮಗೆ ಆಸಕ್ತಿ ಹೋಗಿ ಬಿಡುತ್ತದೆ. ಇನ್ನೂ ಎರಡು ತಿಂಗಳು ಇದೆ. ದೇಶವನ್ನೇ ತಲೆಕೆಳಗೆ ಮಾಡಬಹುದು ಎಂದರು.

ಸುರ್ಜೇವಾಲಾ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಅವರು ಮೊದಲನೇ ಸಲ ಇಲ್ಲಿಗೆ ಬಂದು ಏನು ಮಾಡಿದ್ರೋ, ಎರಡನೇ ಬಾರಿಯೂ ಅದನ್ನೆ ಮಾಡೋದು. ಅವರು ನಮ್ಮ ಉಸ್ತುವಾರಿ ಕಾರ್ಯದರ್ಶಿಗಳಿದ್ದಾರೆ. ಎಐಸಿಸಿಯಿಂದ ಕರ್ನಾಟಕಕ್ಕೆ ನೇಮಕವಾಗಿದ್ದಾರೆ. ನಮ್ಮಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆಯೋ ಅದನ್ನು ಹತ್ತಿರದಿಂದ ಗಮನಿಸಿ, ಕೇಂದ್ರಕ್ಕೆ ವರದಿಯನ್ನು ಕೊಡುತ್ತಾರೆ. ಆ ಜವಾಬ್ದಾರಿ ಕೆಲಸವನ್ನು ಅವರು ನಿರ್ವಹಿಸುತ್ತಿದ್ದಾರೆ. ಅದರಲ್ಲಿ ವಿಶೇಷತೆ ಹುಡುಕಬಾರದು ಎಂದರು.

ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯನವರೇ ಹೇಳೀದ್ದಾರಲ್ಲಾ. ಇನ್ನೇಕೆ ಆ ಬಗ್ಗೆ ಚರ್ಚೆ ಎಂದರು. ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂಥ ನನಗನ್ನಿಸುವುದಿಲ್ಲ. ಅವರಿಗೆ ಅಂಥ ಮನಸ್ಥಿತಿ ಇಲ್ಲ. ಅವರು ರಾಜ್ಯ ರಾಜಕಾರಣದಲ್ಲಿಯೇ ಇರುವಂಥವರು. ಮುಂದೆ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ. ಆದರೆ, ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ ಅಷ್ಟೇ. ಅವರ ಶಕ್ತಿ ಇರುವವರೆಗೂ ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ರಾಜಣ್ಣ ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ