ಹೆಬ್ಬಾಳ ಫ್ಲೈಓವರ್ ನಿಂದ ಸಿಬಿಐ ಜಂಕ್ಷನ್‌ಗಳಲ್ಲಿದ್ದ ಅಂಗಡಿ ಎತ್ತಂಗಡಿ

Published : Aug 13, 2026, 09:08 AM IST
Hebbal Flyover

ಸಾರಾಂಶ

ನಗರದ ಉತ್ತರ ಹಾಗೂ ಕೇಂದ್ರ ಪಾಲಿಕೆ ವ್ಯಾಪ್ತಿಗಳಲ್ಲಿ ಬುಧವಾರ ಒಟ್ಟು 10.10 ಕಿ.ಮೀ. ಉದ್ದದ ರಸ್ತೆಯಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ. ಹೆಬ್ಬಾಳ ಫ್ಲೈಓವರ್‌ನಿಂದ ಸಿಬಿಐ ರಸ್ತೆವರೆಗೆ 1.90 ಕಿ.ಮೀ ತೆರವು

ಬೆಂಗಳೂರು: ನಗರದ ಉತ್ತರ ಹಾಗೂ ಕೇಂದ್ರ ಪಾಲಿಕೆ ವ್ಯಾಪ್ತಿಗಳಲ್ಲಿ ಬುಧವಾರ ಒಟ್ಟು 10.10 ಕಿ.ಮೀ. ಉದ್ದದ ರಸ್ತೆಯಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.

ಹೆಬ್ಬಾಳ ಫ್ಲೈಓವರ್‌ನಿಂದ ಸಿಬಿಐ ರಸ್ತೆವರೆಗೆ 1.90 ಕಿ.ಮೀ ತೆರವು

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಬ್ಬಾಳ ಫ್ಲೈಓವರ್‌ನಿಂದ ಸಿಬಿಐ ರಸ್ತೆವರೆಗೆ 1.90 ಕಿ.ಮೀ ಹಾಗೂ ಯಲಹಂಕದ ವೀರಸಾಗರ ರಸ್ತೆ 1 ಕಿ.ಮೀ ರಸ್ತೆಯಲ್ಲಿದ್ದ ಪೆಟ್ಟಿ ಅಂಗಡಿ, 7 ತಳ್ಳುವ ಗಾಡಿ, 26 ಎಸಿ ಶೀಟ್‌, ಕ್ಯಾನೋಪಿ, 47 ಮೆಟ್ಟಿಲುಗಳು, 18 ಜಾಹೀರಾತು ಕಂಬಗಳನ್ನು ತೆರವುಗೊಳಿಸಲಾಗಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಬುಧವಾರ 6 ಪ್ರಮುಖ ರಸ್ತೆಗಳ 7.20 ಕಿ.ಮೀ. ಪಾದಚಾರಿ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.

ಪಾದಚಾರಿ ರಸ್ತೆ ಒತ್ತುವರಿ ತೆರವು

ಸರ್.ಸಿ.ವಿ.ರಾಮನ್ ನಗರದ 100 ಅಡಿ ರಸ್ತೆ ಇಂದಿರಾ ನಗರ ಹಾಗೂ ಎಂ.ಎಂ ರಸ್ತೆ ಎಡ ಭಾಗ ರಸ್ತೆಯ 2.50 ಕಿಮೀ, ಶಾಂತಿ ನಗರ ವಿಭಾಗದಲ್ಲಿ ಲಕ್ಷ್ಮಿ ರಸ್ತೆ 5ನೇ ಕ್ರಾಸ್ ಮತ್ತು ಮುಖ್ಯ ರಸ್ತೆ 1.70 ಕಿ.ಮೀ, ಗಾಂಧಿನಗರ ವಿಭಾಗದಲ್ಲಿ ಟ್ಯಾಂಕ್ ಬಂಡ್ ರಸ್ತೆಯ 1.20 ಕಿ.ಮೀ, ಚಿಕ್ಕಪೇಟೆ ವಿಭಾಗದಲ್ಲಿ ಫುಡ್ ಸ್ಟ್ರೀಟ್ ವಿ.ವಿ.ಪುರಂನಲ್ಲಿ 1.80 ಕಿ.ಮೀ ರಸ್ತೆಯಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಲವಂತವಾಗಿ ಬಂದ್‌ ಮಾಡಿಸಿದ್ರೆ ಕ್ರಮ : ಸೀಮಂತ್‌ ಕುಮಾರ್‌
ರಾಜ್ಯದಲ್ಲಿ ಪಾನ್‌ ಮಸಾಲ, ಗುಟ್ಕಾ ಸಂಪೂರ್ಣ ನಿಷೇಧ