ಶಿವರಾತ್ರಿದಿನ ಸೋಮನಾಥ ಜ್ಯೋತಿರ್ಲಿಂಗ ದರ್ಶನ - ಆರ್ಟ್ ಆಫ್ ಲಿವಿಂಗ್‌ನಿಂದ ದರ್ಶನಕ್ಕೆ ಅವಕಾಶ

Published : Feb 25, 2025, 10:08 AM IST
shivarathri

ಸಾರಾಂಶ

ಮಹಾ ಶಿವರಾತ್ರಿ ಪ್ರಯುಕ್ತ ಆರ್ಟ್ ಆಫ್‌ ಲಿವಿಂಗ್‌ನಲ್ಲಿ ರವಿಶಂಕರ ಗುರೂಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದ್ದು, ವಿಶೇಷವಾಗಿ ಒಂದು ಸಾವಿರ ವರ್ಷಗಳ ಬಳಿಕ ಪುರಾತನ ಸೋಮನಾಥ ಜ್ಯೋತಿರ್ಲಿಂಗವನ್ನು ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

  ಬೆಂಗಳೂರು : ಮಹಾ ಶಿವರಾತ್ರಿ ಪ್ರಯುಕ್ತ ಆರ್ಟ್ ಆಫ್‌ ಲಿವಿಂಗ್‌ನಲ್ಲಿ ರವಿಶಂಕರ ಗುರೂಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದ್ದು, ವಿಶೇಷವಾಗಿ ಒಂದು ಸಾವಿರ ವರ್ಷಗಳ ಬಳಿಕ ಪುರಾತನ ಸೋಮನಾಥ ಜ್ಯೋತಿರ್ಲಿಂಗವನ್ನು ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಫೆ.26ರಂದು ಸಂಜೆ 6.30ಕ್ಕೆ ಮಹಾ ರುದ್ರಾಭಿಷೇಕ ಮತ್ತು ಮಹಾ ಸತ್ಸಂಗದೊಂದಿಗೆ ಶಿವರಾತ್ರಿ ಉತ್ಸವ ಆರಂಭವಾಗಲಿದ್ದು, ಫೆ.27ರ ಬೆಳಗ್ಗೆ 4ಕ್ಕೆ ಮಹಾ ರುದ್ರಹೋಮ, ಜಪ-ತಪ, ಧ್ಯಾನ ಮತ್ತು ರುದ್ರಪೂಜೆಯ ಮಂತ್ರಘೋಷಗಳು ಜರುಗಲಿವೆ. ಪ್ರಮುಖವಾಗಿ 1000 ವರ್ಷಗಳ ಹಿಂದೆ ಭಗ್ನವಾಗಿ ಕಣ್ಮರೆಯಾಗಿದ್ದ ಸೋಮನಾಥ ಜ್ಯೋತಿರ್ಲಿಂಗದ ಪುನರ್ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕ್ರಿ.ಶ.1025ರಲ್ಲಿ ಮಹಮ್ಮದ್‌ ಘಜ್ನಿಯು ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದ್ದ. ಆಗ ಭಗ್ನಗೊಂಡಿದ್ದ ಜ್ಯೋತಿರ್ಲಿಂಗ ಭೂಮಿಯಿಂದ 2 ಅಡಿ ಎತ್ತರದಲ್ಲಿ ತೇಲುತ್ತಿತ್ತು ಎಂದು ಹೇಳಲಾಗುತ್ತದೆ. ಅಗ್ನಿಹೋತ್ರಿ ಬ್ರಾಹ್ಮಣರು ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕೊಂಡೊಯ್ದು, ದಕ್ಷಿಣ ಭಾರತದಲ್ಲಿ ರಹಸ್ಯವಾಗಿ ಆರಾಧನೆ ಮುಂದುವರೆಸಿದರು. ಸೀತಾರಾಮ ಶಾಸ್ತ್ರಿ ಎಂಬುವವರು ಅದನ್ನು ಪೂಜಿಸುತ್ತಿದ್ದು, 20 ವರ್ಷಗಳಿಂದ ಇದರ ಪುನಃ ಪ್ರತಿಷ್ಠಾಪನೆಯ ನಿರೀಕ್ಷೆಯಲ್ಲಿದ್ದರು.

ಈ ವರ್ಷದ ಜನವರಿಯಲ್ಲಿ, ರವಿಶಂಕರ್‌ ಗುರೂಜಿ ಅವರ ನೇತೃತ್ವದಲ್ಲಿ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರಕ್ಕೆ ತರಲಾಗಿದ್ದು, ಗುರೂಜಿ ಅದನ್ನು ಅನಾವರಣ ಮಾಡಿದ್ದರು. ಶ್ರೀಗಳು ಲಿಂಗವನ್ನು ಕೈಯಲ್ಲಿ ಹಿಡಿದು ಅದರ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ಪ್ರದರ್ಶಿಸಿದ್ದರು. ಈ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ, ವಿಶೇಷ ಚುಂಬಕ ಶಕ್ತಿಯ ಗುಣಗಳು ಇವೆ ಎಂದು ಆರ್ಟ್ ಆಫ್ ಲೀವಿಂಗ್‌ನ ಪ್ರಕಟಣೆ ತಿಳಿಸಿದೆ.

PREV

Recommended Stories

ವೃಷಭಾವತಿ ವಿಚಾರದಲ್ಲಿ ರಿಯಲ್ಎ ಸ್ಟೇಟ್ ಮಾಫಿಯಾದ ಅಪಪ್ರಚಾರ
ತೆರಿಗೆ ಪಾವತಿಯಲ್ಲಿ ಕರ್ನಾಟಕದ್ದು ಎರಡನೇ ಸ್ಥಾನ