ಶಿಕ್ಷಕರ ವರ್ಗ : ಜು.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

Published : Jun 23, 2025, 10:20 AM IST
Vidhan soudha

ಸಾರಾಂಶ

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

 ಬೆಂಗಳೂರು :  ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಘಟಕದೊಳಗೆ ಮತ್ತು ಹೊರಗೆ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಜು.5ರವರೆಗೆ ಅವಕಾಶ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರು, ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೂ.26ರಿಂದ 30ರವರೆಗೆ ಶಾಲಾವಾರು/ವಿಷಯವಾರು/ವೃಂದವಾರು ಹುದ್ದೆಗಳಿಗೆ ಕಾರ್ಯನಿರತ ಶಿಕ್ಷಕರ ಮರು ಹೊಂದಾಣಿಕೆಗೆ ಮಾಡಬೇಕು. ಜು.2ರಂದು ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಗೆ ಕರಡು ಪಟ್ಟಿ ಪಟ್ಟಿ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.

ಆಡಳಿತಾತ್ಮಕ ಕಾರಣದಿಂದ ವೇಳಾಪಟ್ಟಿ ಪರಿಷ್ಕರಿಸಿದ್ದು, ಆದ್ಯತೆ ಕೋರುವ ಪ್ರಕರಣಗಳಲ್ಲಿ ಸಮರ್ಪಕ ದಾಖಲೆ ಸಲ್ಲಿಸದ ಶಿಕ್ಷಕರ ಅರ್ಜಿಗಳನ್ನು ಬಿಇಒಗಳ ಹಂತದಲ್ಲೇ ತಿರಸ್ಕರಿಸುವಂತೆ ಸೂಚಿಸಲಾಗಿದೆ. 

ಹೆಚ್ಚುವರಿ ಶಿಕ್ಷಕರು ಸಲ್ಲಿಸುವ ದಾಖಲೆಗಳ ಪರಿಶೀಲನೆಗೆ ಜು.7, ಆಕ್ಷೇಪಣೆ ಪರಿಶೀಲಿಸಿ ತಾತ್ಕಾಲಿಕ ಆದ್ಯತಾ ಪಟ್ಟಿ ನೀಡಲು ಜು.8 ಹಾಗೂ ಕೋರಿಕೆ, ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹೊಂದಾಣಿಕೆಗೆ ಜು.15ರಂದು ಕೌನ್ಸೆಲಿಂಗ್ ನಡೆಸಲು ಸೂಚಿಸಿದೆ. ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ಅನುಕೂಲಕ್ಕೆ ಜು.19ರಂದು ಖಾಲಿ ಹುದ್ದೆಗಳ ಪ್ರಕಟಣೆ ಜು.21ರಂದು ವರ್ಗಾವಣೆಗೆ ಅರ್ಹರಾಗಿರುವ ಶಿಕ್ಷಕರ ಅಂತಿಮ ವೇಳಾಪಟ್ಟಿ ಪ್ರಕಟಿಸಲು ತಿಳಿಸಲಾಗಿದೆ. ಜು.24 ರಿಂದ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆಯಲಿದೆ.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ