ಕೇವಲ 1 ಡಾಲರ್ ಟಿಕೆಟ್‌ನಲ್ಲಿ ವಿಯಟ್ನಾಂ ಪ್ರವಾಸ ಕೈಗೊಳ್ಳಿ

Published : Oct 29, 2026, 11:09 AM IST
Flight

ಸಾರಾಂಶ

ಭಾರತ-ವಿಯೆಟ್ನಾಂ ನಡುವೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಯಟ್ ಜೆಟ್ ವಿಮಾನ ಸಂಸ್ಥೆ ನವೆಂಬರ್ 1, 2026 ಅಕ್ಟೋಬರ್ 31, 2027ರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಕೇವಲ 1 ಡಾಲರ್ಬೆ ಲೆಯಲ್ಲಿ ಮುಂಗಡ ಟೆಕೆಟ್ ಕಾಯ್ದಿರಿಸುವ ಅವಕಾಶ ನೀಡಿದೆ.

ಬೆಂಗಳೂರು : ಭಾರತ-ವಿಯೆಟ್ನಾಂ ನಡುವೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಯಟ್ ಜೆಟ್ ವಿಮಾನ ಸಂಸ್ಥೆ ನವೆಂಬರ್ 1, 2026 ಅಕ್ಟೋಬರ್ 31, 2027ರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಕೇವಲ 1 ಡಾಲರ್ (ತೆರಿಗೆಗಳು ಮತ್ತು ಶುಲ್ಕಗಳನ್ನು ಹೊರತುಪಡಿಸಿ) ಬೆಲೆಯಲ್ಲಿ ಮುಂಗಡ ಟೆಕೆಟ್ ಕಾಯ್ದಿರಿಸುವ ಅವಕಾಶ ನೀಡಿದೆ.

ಭಾರತದ 10 ವಿಮಾನ ನಿಲ್ದಾಣಗಳಿಗೆ ತನ್ನ ವಿಮಾನಗಳನ್ನು ಆರಂಭ

ಭಾರತದ 10 ವಿಮಾನ ನಿಲ್ದಾಣಗಳಿಗೆ ತನ್ನ ವಿಮಾನಗಳನ್ನು ಆರಂಭಿಸಿದ್ದು, ಪ್ರಯಾಣಿಕರನ್ನು ಆಕರ್ಷಿಸಲು ಪ್ರೊಮೋಷನಲ್ ಪ್ರೈಸ್ ಆಗಿ ಈ ದರ ನೀಡುತ್ತಿದೆ.

ಸೀಮಿತ ಅವಧಿಗೆ ಕೊಡುಗೆ ನೀಡುತ್ತಿರುವ ವಿಯೆಟ್ ಜೆಟ್ ಸಂಸ್ಥೆ ಹನೋಯ್-ತೈನಾನ್ ಮಾರ್ಗವನ್ನು ಹೊಸದಾಗಿ ಪ್ರಾರಂಭಿಸಿದೆ. ಅಲ್ಲದೆ ಹೋ ಚಿ ಮಿನ್ಹ್ ಸಿಟಿ ಮತ್ತು ಚಿಯಾಂಗ್ ಮಾಯ್ ನಡುವೆ ತನ್ನ ನೇರ ವಿಮಾನಗಳನ್ನು ಪುನರಾರಂಭಿಸಿದೆ. ಅಲ್ಲದೆ, ಏಷ್ಯಾದಲ್ಲಿ ತನ್ನ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

www.vietjetair.com ಅಥವಾ ವಿಯೆಟ್ ಜೆಟ್ ಏರ್ ಮೊಬೈಲ್ ಅಪ್ಲಿಕೇಶನ್ ಮೂಲಕ ದರಗಳನ್ನು ಬುಕ್ ಮಾಡಬಹುದು

ಭಾರತೀಯ ಪ್ರಯಾಣಿಕರು ಅ.26ರಿಂದ ನವೆಂಬರ್ 1, 2026 (IST) ರಂದು 21:30 ರವರೆಗೆ www.vietjetair.com ಅಥವಾ ವಿಯೆಟ್ ಜೆಟ್ ಏರ್ ಮೊಬೈಲ್ ಅಪ್ಲಿಕೇಶನ್ ಮೂಲಕ ದರಗಳನ್ನು ಬುಕ್ ಮಾಡಬಹುದು. ಈ ಕೊಡುಗೆ ದೆಹಲಿ, ಮುಂಬೈ, ಅಹಮದಾಬಾದ್, ಹೈದರಾಬಾದ್ ಮತ್ತು ಬೆಂಗಳೂರಿನಿಂದ ವಿಯೆಟ್ನಾಂನ ಅತಿದೊಡ್ಡ ನಗರಗಳಾದ ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಕ್ಕೆ ಸಂಪರ್ಕಿಸುವ ವಿಮಾನಗಳಿಗೆ ನವೆಂಬರ್ 1, 2026 ಮತ್ತು ಅಕ್ಟೋಬರ್ 31, 2027 ರ ನಡುವೆ ಪ್ರಯಾಣಿಸಲು ಮಾತ್ರ ಅನ್ವಯಿಸುತ್ತದೆ (ಬ್ಲಾಕ್‌ಔಟ್ ದಿನಾಂಕಗಳು ಅನ್ವಯಿಸುತ್ತವೆ). ವಿಯೆಟ್ನಾಂನ ದೇಶೀಯ ಮತ್ತು ವಿಯೆಟ್ ಜೆಟ್ ನೆಟ್‌ವರ್ಕ್‌ನಾದ್ಯಂತ ಇತರ ಅಂತರರಾಷ್ಟ್ರೀಯ ಮಾರ್ಗಗಳಲ್ಲಿಯೂ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಬ್ಬು ಕಿಚ್ಚು; ಇಂದು ಕೇಂದ್ರ ತಂಡದಿಂದ ಬೆಂಗ್ಳೂರಲ್ಲಿ ಸಭೆ?
ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ