ಮಿಸ್‌ ಯೂನಿವರ್ಸ್‌ ಸ್ಪರ್ಧೆಗೆ ಉಡುಪಿಯ ಯುವತಿ ಆಯ್ಕೆ

Published : Jul 17, 2026, 10:15 AM IST
Spoorthi Shetty Miss Universe India finalist

ಸಾರಾಂಶ

ಉಡುಪಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವತಿ ಸ್ಪೂರ್ತಿ ಶೆಟ್ಟಿ ಇದೀಗ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆ.23ರಂದು ನವದೆಹಲಿಯಲ್ಲಿ ಮಿಸ್ ಯುನಿವರ್ಸ್ ಇಂಡಿಯಾ ಫೈನಲ್ ನಡೆಯಲಿದ್ದು, ಇದರಲ್ಲಿ ಸ್ಪೂರ್ತಿ ತಮ್ಮ ಪ್ರತಿಭೆ ತೋರಲಿದ್ದಾರೆ.

ಉಡುಪಿ :  ಉಡುಪಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವತಿ ಸ್ಪೂರ್ತಿ ಶೆಟ್ಟಿ ಇದೀಗ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆ.23ರಂದು ನವದೆಹಲಿಯಲ್ಲಿ ಮಿಸ್ ಯುನಿವರ್ಸ್ ಇಂಡಿಯಾ ಫೈನಲ್ ನಡೆಯಲಿದ್ದು, ಇದರಲ್ಲಿ ಸ್ಪೂರ್ತಿ ತಮ್ಮ ಪ್ರತಿಭೆ ತೋರಲಿದ್ದಾರೆ.

 ವೈಲ್ಡ್ ಕಾರ್ಡ್ ಎಂಟ್ರಿ

ಈ ಸ್ಪರ್ಧೆಯ ಆರಂಭಿಕ ಸುತ್ತಿನಲ್ಲಿ ಸ್ಪೂರ್ತಿ ಶೆಟ್ಟಿ ಕರ್ನಾಟಕ ವಿಭಾಗದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದು ಮಾತ್ರವಲ್ಲದೆ ಅಂತಿಮ ಸುತ್ತನ್ನೂ ತಲುಪಿದ್ದಾರೆ. ಅಲ್ಲಿ ದೇಶದಾದ್ಯಂತದ 50 ಮಂದಿ ಯುವತಿಯರೊಂದಿಗೆ ಸ್ಪರ್ಧಿಸಲಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ಸ್ಪೂರ್ತಿ

ಉಡುಪಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ಸ್ಪೂರ್ತಿ ಎಂಬಿಎ ಪದವಿಧರೆ. ಜೊತೆಗೆ ಮಾಡಲಿಂಗ್ ಕೂಡ ಮಾಡುತಿದ್ದಾರೆ. ಈಕೆಯ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿದ್ದಾರೆ. ಸ್ಪೂರ್ತಿ ಅವರು ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾನಿಗಾಗಲೇ ಅಂತಿಮ ಸುತ್ತಿಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ವಿಜೇತಳಾಗುತ್ತೇನೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾಳೆ. ತನ್ನಂತಹ ಸಾಮಾನ್ಯ ಕುಟುಂಬದಿಂದ ಬಂದ ಹೆಣ್ಣುಮಕ್ಕಳು ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ತಾನು ಉದಾಹರಣೆಯಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ್ದಾಳ‍ೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

‘ಎ’ ದೇಗುಲಗಳ ನಿಶ್ಚಿತ ಠೇವಣಿ ಅವುಗಳ ಅಭಿವೃದ್ಧಿಗೇ ಬಳಕೆ : ಪರಂ
ಭಾರತ ಕಸದ ತೊಟ್ಟಿ ಆಗಲು ಬಿಡಲ್ಲ: ಜೋಶಿ