ಉರ್ದು ಹಬ್ಬ: ಕನ್ನಡ ಸಂಘಟನೆಗಳ ಕಿಡಿ - ಉರ್ದು ಬಾಷಿಕರನ್ನು ಎತ್ತಿಕಟ್ಟುವ ಹುನ್ನಾರ

Published : Oct 02, 2026, 10:13 AM IST
urdu habba in vidhana soudha

ಸಾರಾಂಶ

ರಾಜ್ಯ ಸರ್ಕಾರ ನ.9ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲು ಉದ್ದೇಶಿಸಿರುವ ‘ಉರ್ದು ಹಬ್ಬ’ಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅವಕಾಶ ನೀಡಿದರೆ ಮುಂದೆ ಆಗುವಂತ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರ ನ.9ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲು ಉದ್ದೇಶಿಸಿರುವ ‘ಉರ್ದು ಹಬ್ಬ’ಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದಾಗಿದೆ, ಉರ್ದು ಹಬ್ಬಕ್ಕೆ ಅವಕಾಶ ನೀಡಿದರೆ, ಹಿಂದಿ, ತಮಿಳು, ತೆಲುಗು ಸೇರಿ ಇತರೆ ಭಾಷಿಕರು ಕೂಡ ಅವಕಾಶ ಕೇಳಿಕೊಂಡು ಬಂದರೆ ಸರ್ಕಾರ ಅನುಮತಿ ನೀಡುತ್ತದೆಯೇ? ಯಾವುದೇ ಕಾರಣಕ್ಕೂ ಸರ್ಕಾರ ಉರ್ದು ಹಬ್ಬಕ್ಕೆ ಅವಕಾಶ ಮಾಡಿಕೊಡಬಾರದು, ಒಂದು ವೇಳೆ ಅವಕಾಶ ನೀಡಿದರೆ ಮುಂದೆ ಆಗುವಂತ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಅವಿವೇಕದ ನಡೆ:

ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಟ್ವೀಟ್ ಮಾಡಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸುವ ನಿರ್ಧಾರ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದೆ. ಇದೊಂದು ಅವಿವೇಕದ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವಾಗಿದೆ. ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು, ಕಳೆದ ಬಾರಿ ಟಿಪ್ಪು ಜಯಂತಿ ಮಾಡಿ, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದಾಗಲೂ ಎಚ್ಚೆತ್ತುಕೊಂಡಿಲ್ಲ. ಇವತ್ತು ರಾಜ್ಯದಲ್ಲಿ ಒಂದು ಧರ್ಮದ ಜನರನ್ನು ಎತ್ತಿಕಟ್ಟುವ ಮೂಲಕ ಅಲ್ಲಲ್ಲಿ ಪಾಕಿಸ್ತಾನ್‌ ಧ್ವಜ ಹಾಕಿ ಜೈಕಾರ ಹಾಕುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಘಟನೆಗಳು ಮರುಕಳಿಸಬಾರದು. ಉರ್ದು ಹಬ್ಬ ಮಾಡಲು ಮುಂದಾದರೆ, ಮುಂದೆ ಆಗುವಂತ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಇತರೆ ಭಾಷಿಕರು ಕೂಡ ಅವಕಾಶ ಕೇಳಿಕೊಂಡು ಬಂದರೆ

ಕರ್ನಾಟಕ ವಿಕಾಸ ರಂಗದ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಅವರು ಉರ್ದು ಹಬ್ಬಕ್ಕೆ ಅವಕಾಶ ನೀಡಿದರೆ, ಹಿಂದಿ, ತಮಿಳು, ತೆಲುಗು ಸೇರಿದಂತೆ ಇತರೆ ಭಾಷಿಕರು ಕೂಡ ಅವಕಾಶ ಕೇಳಿಕೊಂಡು ಬಂದರೆ ಸರ್ಕಾರ ಅನುಮತಿ ನೀಡುತ್ತದೆಯೇ? ಕನ್ನಡಿಗರೆಲ್ಲರು ಇಂತಹ ನಿರ್ಧಾರದ ವಿರುದ್ಧ ದಂಗೆ ಎದ್ದೇಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶೇ.30ರಷ್ಟು ಹಿಂಗಾರು ಮಳೆ ಕೊರತೆ ಮುನ್ಸೂಚನೆ
22 ತಾಲೂಕು ಬಿಟ್ಟು ಇಡೀ ಕರ್ನಾಟಕದಲ್ಲಿ ಬರಗಾಲ