ಲಡಾಕ್‌ನಲ್ಲಿ ವಚನಾನಂದ ಶ್ರೀ ಯೋಗ ದಿನಾಚರಣೆ

Published : Jun 22, 2025, 08:41 AM IST
Vachanananda Swamiji

ಸಾರಾಂಶ

11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರದರ್ಶನ ನಡೆಸಲಾಯಿತು.

 ಬೆಂಗಳೂರು :  ಕೇಂದ್ರ ಆಯುಷ್‌ ಇಲಾಖೆ, ಲಡಾಕ್‌ ಕೇಂದ್ರಾಡಳಿತ ಪ್ರದೇಶ ವತಿಯಿಂದ ಲೇಹ್‌ ಲಡಾಕ್‌ನ ಅಸ್ಟ್ರಾಟರ್ಪ್‌ ಕ್ರೀಡಾಂಗಣದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರದರ್ಶನ ನಡೆಸಲಾಯಿತು.

ಈ ವೇಳೆ ವಚನಾನಂದ ಸ್ವಾಮೀಜಿ ಅವರು ಪ್ರಸಕ್ತ ಸಾಲಿನ ಯೋಗ ದಿನಾಚರಣೆಯ ಧ್ಯೇಯವಾಗಿರುವ ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ವಿಶ್ವಶಾಂತಿಯ ಸಂದೇಶ ಹರಡಿದರು. ಯೋಗ ಎಂಬುದು ಶ್ವಾಸದ ಶುದ್ಧತೆ, ಶಾಂತಿಯ ಸ್ಪರ್ಶ, ಮಾತುಗಳಿಲ್ಲದ ತುದಿಯಲ್ಲಿ ಒಂದಾಗುವ ಆತ್ಮಸಾನ್ನಿಧ್ಯ ಎಂದು ಹೇಳಿದರು.

ಈ ವೇಳೆ ಭಿಕ್ಕು ಸಂಘ ಸೇನಾಜೀ, ಸದ್ಗುರು ಬೃಹ್ಮೆಶಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಅರ್ಜುನ ರಾಮ್ ಮೇಘವಾಲ್, ಮಾಜಿ ಲೆಫ್ಟಿನೆಂಟ್‌ ಗವರ್ನರ್ ಡಾ.ಕಿರಣ್ ಬೇಡಿ ಹಾಗೂ ಲಡಾಕ್ ಸರ್ಕಾರದ ಸಚಿವರು, ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮೊದಲು ಶುಕ್ರವಾರವೂ ಶ್ವಾಸಯೋಗ ಸಂಸ್ಥೆ ಕೇಂದ್ರ ಆಯುಷ್ ಇಲಾಖೆ, ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಸಹಯೋಗದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲೇಹ್ ಲಡಾಕ್‌ನ ಪ್ಯಾಂಗಾಂಗ್ ಸರೋವರ ತಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ನಡೆಸಲಾಗಿತ್ತು. ಈ ವೇಳೆಯೂ ಡಾ.ಕಿರಣ್‌ ಬೇಡಿ ಹಾಗೂ ಭಿಕ್ಕು ಸಂಘಸೇನಾ ಅವರು ಸೇರಿದಂತೆ ನೂರಾರು ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡಿದ್ದರು.

PREV
Read more Articles on

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ