ನಿಮ್ಮ ವಾಹನದ ಟ್ರಾಫಿಕ್ ಉಲ್ಲಂಘನೆ, ದಂಡ ಮಾಹಿತಿ ಸಿಗ್ನಲ್‌ನ ಪರದೆಯಲ್ಲಿ ಬಿತ್ತರ!

Published : Sep 25, 2025, 07:30 AM IST
Mumbai traffic signals

ಸಾರಾಂಶ

ತಾವೆಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದೀರಿ. ಎಷ್ಟು ದಂಡ ಕಟ್ಟಬೇಕಿದೆ. ಇವೆಲ್ಲ ಮಾಹಿತಿ ಟ್ರಿನಿಟಿ ವೃತ್ತದಲ್ಲಿ ನಿಮ್ಮ ವಾಹನ ನಿಂತ ಕೂಡಲೇ ಆ ವೃತ್ತದ ಪರದ ಮೇಲೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಿದೆ!!!

  ಬೆಂಗಳೂರು: ತಾವೆಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದೀರಿ. ಎಷ್ಟು ದಂಡ ಕಟ್ಟಬೇಕಿದೆ. ಇವೆಲ್ಲ ಮಾಹಿತಿ ಟ್ರಿನಿಟಿ ವೃತ್ತದಲ್ಲಿ ನಿಮ್ಮ ವಾಹನ ನಿಂತ ಕೂಡಲೇ ಆ ವೃತ್ತದ ಪರದ ಮೇಲೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಿದೆ!!!

ಹೌದು ಇಂಥದೊಂದು ಸಂಚಾರ ನಿಯಮ ಕುರಿತು ಅರಿವು ಮೂಡಿಸುವ ವಿನೂತನ ಪ್ರಯೋಗಕ್ಕೆ ಖಾಸಗಿ ಕಂಪನಿ ಜತೆ ಪೊಲೀಸರು ಕೈ ಜೋಡಿಸಿದ್ದಾರೆ. ಟ್ರಿನಿಟಿ ವೃತ್ತದಲ್ಲಿ ಪ್ರಾಯೋಗಿಕವಾಗಿ ಈ ಸಾರ್ವಜನಿಕ ಪ್ರದರ್ಶನ ವ್ಯವಸ್ಥೆ ಜಾರಿಗೆ ಬಂದಿದೆ.

ಟ್ರಿನಿಟಿ ವೃತ್ತದಲ್ಲಿ ಬಳಸಿದ ಕಾರುಗಳ ಮಾರಾಟ ಕಂಪನಿಯ ಕಾರ್ಸ್‌-24 ಪರದೆ ಅಳವಡಿಸಿದೆ. ಈ ಪರದೆಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಬಾಕಿ ದಂಡ ಉಳಿಸಿಕೊಂಡಿರುವ ವಾಹನಗಳ ಕುರಿತ ದತ್ತಾಂಶವನ್ನು ಸಂಚಾರ ವಿಭಾಗದ ಪೊಲೀಸರಿಂದ ಸಂಗ್ರಹಿಸಿ ಅಡಕಗೊಳಿಸಲಾಗಿದೆ. ಆ ವೃತ್ತದಲ್ಲಿ ನಿಲ್ಲುವ ಅಥವಾ ಆ ವೃತ್ತ ಹಾದು ಹೋಗುವ ವಾಹನಗಳ ಕ್ಯಾಮೆರಾಗಳು ಸೆರೆ ಹಿಡಿಯಲಿವೆ. ಆ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದರೆ ಕೂಡಲೇ ವೃತ್ತದಲ್ಲಿನ ಪರದೆ ಮೇಲೆ ಬಾಕಿ ಪ್ರಕರಣಗಳ ವಿವರ ಪ್ರದರ್ಶನವಾಗಲಿದೆ. ಅಲ್ಲದೆ ಸಂಚಾರ ದಂಡ ಪಾವತಿಸುವಂತೆ ಮಾಹಿತಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿವರ ಸಾರ್ವಜನಿಕವಾಗಿ ಸಿಗಲಿದೆ. ಆ ಮಾಹಿತಿಯನ್ನೇ ಪಡೆದು ಕಾರ್ಸ್-24 ಕಂಪನಿ ಬಿತ್ತರಿಸುತ್ತಿದೆ. ಇದರಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

PREV
Read more Articles on

Recommended Stories

2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಕೃಷಿ ಮೇಳದಲ್ಲಿ ವಿವಿಧ ಕೀಟ ಖಾದ್ಯಗಳ ಹವಾ - ಮಿಡತೆ ಫ್ರೈ, ಜಿರಳೆ ಪಕೋಡ, ಮಿಡತೆ ಕಬಾಬ್‌