4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆ

Published : Jul 06, 2026, 10:27 AM IST
crime

ಸಾರಾಂಶ

ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್‌ ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ನಡೆದಿದೆ

  ಬೆಂಗಳೂರು :  ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್‌ ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್‌ ಕಾಲೇಜು ಸಮೀಪದ ಕಟ್ಟಡದಲ್ಲಿ ನಡೆದಿದೆ.

ಕೇರಳ ಮೂಲದ ಮರಿಯಾ (32) ಮತ್ತು ಆಕೆಯ 4 ವರ್ಷದ ಮಗುವನ್ನು ರಕ್ಷಿಸಲಾಗಿದ್ದು, ಮಹಿಳೆಗೆ ಆಪ್ತ ಸಮಾಲೋಚಕರ ಮೂಲಕ ಕೌನ್ಸೆಲಿಂಗ್‌ ಕೊಡಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್‌ ಕಾಲೇಜು ಸಮೀಪದ ಕಟ್ಟಡದಲ್ಲಿ ಘಟನೆ ನಡೆದಿದೆ.

ಏನಿದು ಘಟನೆ?:

ಬಹಳ ವರ್ಷಗಳಿಂದ ನಗರದಲ್ಲಿಯೇ ವಾಸವಾಗಿರುವ ಮರಿಯಾ ಮೊದಲು ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. 4 ತಿಂಗಳಿಂದ ದೊಡ್ಡಕಮ್ಮನಹಳ್ಳಿಯ ಮಾರುತಿ ಡೆಂಟಲ್‌ ಕಾಲೇಜು ಪಕ್ಕದ ಕಟ್ಟಡದ 4ನೇ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ 4 ವರ್ಷದ ಮಗು ಜತೆ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನ ತನ್ನ ಕೊಠಡಿ ಮೇಲ್ಭಾಗದಲ್ಲಿರುವ ವಾಟರ್‌ ಟ್ಯಾಂಕ್‌ ಮೇಲೆ ಹತ್ತಿ ಆತ್ಮ*ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಹುಳಿಮಾವು ಠಾಣೆಯ ಪೊಲೀಸರು ಮಹಿಳೆಗೆ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ವೇಳೆ ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯ ಅಗ್ನಿಶಾಮಕ ದಳ ಮತ್ತು ಸಿವಿಲ್‌ ಡಿಫೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಟ್ಟಡದ ಕೆಳಗೆ ಬಲೂನ್ ಬೆಡ್‌ ಸಿದ್ದಪಡಿಸಿಕೊಂಡಿದ್ದರು. ನಂತರ ಇನ್‌ಸ್ಪೆಕ್ಟರ್‌ ಜಗದೀಶ್‌ ಅವರು ಆಕೆಗೆ ಸುಮಾರು 2 ಗಂಟೆಗಳ ಕಾಲ ಆಕೆಯನ್ನು ಮನವೊಲಿಸಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಭೇಟಿ ಮಾಡಿಸಲು ಪಟ್ಟು:

ಮಹಿಳೆಯು ನನಗೆ ಪೊಲೀಸರು, ಕೋರ್ಟ್‌ ಹಾಗೂ ಸರ್ಕಾರದಿಂದ ಅನ್ಯಾಯವಾಗಿದೆ. ಯಾರ ಮೇಲೂ ನಂಬಿಕೆ ಇಲ್ಲ. ನಾನು ಇಳಿಯಬೇಕೆಂದರೆ, ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರು, ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ಆಕೆ ಕೆಳಗೆ ಇಳಿದು ಬಂದಿದ್ದಾರೆ. ವಿಚಾರಣೆ ವೇಳೆ ಈ ಹಿಂದಿನ ಪ್ರಕರಣಗಳಲ್ಲಿ ನನಗೆ ಅನ್ಯಾಯವಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಹುಳಿಮಾವು ನಿವಾಸಿಯಾಗಿರುವ ಯುವಕನಿಂದ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದಕ್ಕೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಸದ್ಯ ಆಕೆ ಆರೋಪಿಸಿದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಿಎಂಟಿಸಿ ಬಸ್‌ಗೆ 3 ವರ್ಷದಲ್ಲಿ 150 ಜನ ಬಲಿ : 18 ವರ್ಷದಲ್ಲಿ ಬೆಂಗಳೂರಲ್ಲಿ 1142 ಜನ ಸಾವು
ಓಸಿ ವಿನಾಯ್ತಿ: ವಿದ್ಯುತ್‌ ಸಂಪರ್ಕಕ್ಕೆ ಅರ್ಜಿಗೆ ಆ.15ರವರೆಗೆ ಅವಕಾಶ