ಬೆಂಗಳೂರು : ಕಂಟೋನ್ಮೆಂಟಲ್ಲಿ ಕಾಮಗಾರಿ : ಕೆಲ ರೈಲು ಸಂಚಾರ ಮಾರ್ಗ ಬದಲು

Published : Jun 17, 2025, 08:40 AM IST
Train

ಸಾರಾಂಶ

ನಗರದ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಆಗುತ್ತಿರುವುದರಿಂದ ನಾಲ್ಕು ರೈಲುಗಳ ಮಾರ್ಗ ಬದಲಾಯಿಸಲಾಗಿದ್ದು, ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ನಿಲುಗಡೆ ಆಗುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

 ಬೆಂಗಳೂರು :  ನಗರದ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಆಗುತ್ತಿರುವುದರಿಂದ ನಾಲ್ಕು ರೈಲುಗಳ ಮಾರ್ಗ ಬದಲಾಯಿಸಲಾಗಿದ್ದು, ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ನಿಲುಗಡೆ ಆಗುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಮೈಸೂರು – ಎಸ್‌ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು (06269) ಜೂನ್ 23, 25 ಮತ್ತು 26ರಂದು ಹೊರಡುವ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಮತ್ತು ಎಸ್.ಎಂ.ವಿ.ಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ.

ಕೆಎಸ್ಆರ್ ಬೆಂಗಳೂರು – ನಾಂದೇಡ್ ದೈನಂದಿನ ಎಕ್ಸ್‌ಪ್ರೆಸ್ ರೈಲು (16593) ಜೂನ್ 23, 25 ಮತ್ತು 26, 2025 ರಂದು ಕೆಎಸ್‌ಆರ್ ಬೆಂಗಳೂರಿನಿಂದ 45 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ. ಅಲ್ಲದೆ, ಇದು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಯಲಹಂಕ, ಮತ್ತು ಧರ್ಮಾವರಂ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು – ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ (16022) ಜೂನ್ 23, 25 ಮತ್ತು 26, 2025 ರಂದು ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯಪ್ಪನಹಳ್ಳಿ, ಮತ್ತು ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ.

ಎಸ್‌ಎಂವಿಟಿ ಬೆಂಗಳೂರು – ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು (06270) ಜೂನ್ 23, 25 ಮತ್ತು 26, 2025 ರಂದು ಎಸ್.ಎಂ.ವಿ.ಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ, ಮತ್ತು ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ.

PREV
Read more Articles on

Recommended Stories

ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್
ಜಾತಿ ಗಣತಿ ಈಗ ಕಗ್ಗಂಟು