)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಲವು ಹೋಟೆಲ್‌ಗಳಲ್ಲಿ ಸಿಲಿಂಡರ್ ಅಭಾವದಿಂದಾಗಿ ಇಡ್ಲಿಗೆ ಚಟ್ನಿ ಮಾತ್ರ ನೀಡುತ್ತಿದ್ದು ಸಾಂಬಾರ್ ಕಡಿತ ಮಾಡಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ಅನಿವಾರ್ಯವಾಗಿ ತಿನಿಸುಗಳ ದರವನ್ನು ಹೆಚ್ಚಳ ಮಾಡಿದ್ದು ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಕಾಫಿ-ಟೀ ದರವನ್ನು ಮಾತ್ರ ಹೆಚ್ಚಳ ಮಾಡಿರುವುದು ಕಂಡುಬಂದಿಲ್ಲ.
ಗೃಹ ಬಳಕೆಯ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಸರಬರಾಜು ಮಾಡಲು ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಸಿಬ್ಬಂದಿಯ ಮೊರೆ ಹೋಗಿದ್ದಾರೆ. ತಾಂತ್ರಿಕ ಕಾರಣದಿಂದ ಸಿಲಿಂಡರ್ ಬುಕ್ಕಿಂಗ್ ಮಾಡಲು ಸಾಧ್ಯವಾಗದವರು ಖಾಳಿ ಸಿಲಿಂಡರ್ ಸಮೇತ ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತುಕೊಂಡು ಕಾಯುತ್ತಿರುವುದು ಕಂಡುಬಂತು.ಕಲ್ಯಾಣ ಮಂಟಪದಲ್ಲಿ ಹೊಗೆ
ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಇಪ್ಪತ್ತು-ಇಪ್ಪತ್ತೈದು ಕಲ್ಯಾಣ ಮಂಟಪಗಳಿದ್ದು ಇದು ಕೈಗಾರಿಕಾ ಪ್ರದೇಶ ಎನ್ನುವುದಕ್ಕಿಂತ ಮ್ಯಾರೇಜ್ ಪ್ರದೇಶ ಎಂಬಂತಾಗಿದೆ. ವಿವಾಹ ಸಮಾರಂಭವೊಂದಕ್ಕೆ ಎಂಟರಿಂದ ಹನ್ನೆರಡರವೆಗೂ ಸಿಲಿಂಡರ್ ಅವಶ್ಯಕತೆ ಇರುತ್ತದೆ. ಶುಭ ಕಾರ್ಯ ಕೈಗೊಳ್ಳುವವರಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು.ಅಕ್ರಮ ಗ್ರಾಸ್ ರೀಫಿಲ್ಲಿಂಗ್ ಸಾಧ್ಯತೆ
ಹೋಟೆಲ್‌ಗಳಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್ ಬಳಸುವುದು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಕೆಲ ವಂಚಕರು, ಗೃಹ ಬಳಕೆಯ ಸಿಲಿಂಡರ್‌ನ ಅನಿಲವನ್ನು ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಅಕ್ರಮವಾಗಿ ತುಂಬಿ ಮಾರಾಟ ಮಾಡಬಹುದು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ರೀ ಫಿಲ್ಲಿಂಗ್ ಮಾಡುವಾಗ ಸ್ಫೋಟ ಸಂಭವಿಸಿ ಅಕ್ಕಪಕ್ಕದ ಬಿಲ್ಡಿಂಗ್‌ಗಳಲ್ಲಿ ಇರುವವರ ಪ್ರಾಣಕ್ಕೂ ಸಂಚಕಾರ ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.ಅರಮನೆ ಮೈದಾನಕ್ಕೆ ಸದ್ಯಕ್ಕೆ ತಟ್ಟಿಲ್ಲ ‘ಬಿಸಿ’
ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವವನ್ನು ಕೆಲವರು ಕೃತಕವಾಗಿ ಸೃಷ್ಟಿಸಿ ಸಂದಿಗ್ಧತೆ ತಂದಿಟ್ಟಿರುವ ಸಂಶಯವಿದೆ. ಸಿಲಿಂಡರ್ ಅಭಾವದಿಂದಾಗಿ ಯಾವ ಸಮಾರಂಭಗಳನ್ನೂ ನಮ್ಮಲ್ಲಿ ರದ್ದು ಮಾಡಿಲ್ಲ.-ಭಾಸ್ಕರ್, ಬಿಲ್ಲವ ಅಸೋಸಿಯೇಷನ್ ಕಾರ್ಯದರ್ಶಿ