ಹೆಚ್ಚಿನ ದಾಖಲಾತಿ ಮಾಡಿಸಲು ಬಿಇಒ ಕೇಶವ ಪೆಟ್ಲೂರ ಮನವಿ

KannadaprabhaNewsNetwork |  
Published : May 29, 2026, 02:45 AM IST
ಪ್ರಚಾರ ಸಾಮಗ್ರಿಗಳನ್ನು ಬಿಇಒ ಕೇಶವ ಪೆಟ್ಲೂರ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಾದಾಮಿ : ಗ್ರಾಮೀಣ ಪಟ್ಟಣ ಪ್ರದೇಶದಲ್ಲಿ ಶಾಲೆಯಿಂದ ವಂಚಿತರಾಗಿರುವ ಅರ್ಹ ಹೆಣ್ಣು ಮಕ್ಕಳನ್ನು ಕೆಜಿಬಿವಿ ವಸತಿ ಶಾಲೆಗೆ ಸೇರಿಸಲು ಸಮುದಾಯದವರಿಗೆ ಮಾಹಿತಿ ನೀಡಿ ದಾಖಲಾತಿ ಮಾಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಗ್ರಾಮೀಣ ಪಟ್ಟಣ ಪ್ರದೇಶದಲ್ಲಿ ಶಾಲೆಯಿಂದ ವಂಚಿತರಾಗಿರುವ ಅರ್ಹ ಹೆಣ್ಣು ಮಕ್ಕಳನ್ನು ಕೆಜಿಬಿವಿ ವಸತಿ ಶಾಲೆಗೆ ಸೇರಿಸಲು ಸಮುದಾಯದವರಿಗೆ ಮಾಹಿತಿ ನೀಡಿ ದಾಖಲಾತಿ ಮಾಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಮನವಿ ಮಾಡಿದರು.

ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಬುಧವಾರ 2026-27ನೇ ಸಾಲಿನ ದಾಖಲಾತಿ ಆಂದೋಲನ ಪೂರ್ವಭಾವಿ ಸಭೆಯಲ್ಲಿ ಪ್ರಚಾರ ಸಾಮಗ್ರಿ ಹಾಗೂ ಕೆಜಿಬಿವಿ ಸಮೀಕ್ಷಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಶಾಲೆಯಿಂದ ಹೊರಗುಳಿದ 11 ರಿಂದ 14 ವಯೋಮಾನದ 6 ರಿಂದ 8ನೇ ತರಗತಿಯ ಬಾಲಕಿಯರಿಗಾಗಿ ಉಚಿತ ಸೌಲಭ್ಯದೊಂದಿಗೆ ಸ್ಥಾಪಿತವಾದ ಏಕೈಕ ವಸತಿ ಶಾಲೆ ಇದಾಗಿದೆ. ಶಾಲೆಬಿಟ್ಟ, ಶಾಲೆಗೆ ದಾಖಲಾಗದ ಬಾಲಕಿಯರು, ಎಸ್.ಸಿ, ಎಸ್.ಟಿ. ಅಲ್ಪಸಂಖ್ಯಾತರ ಮಕ್ಕಳು, ಅನಾಥ ಮಕ್ಕಳು, ಯಾವುದೇ ಸಮಸ್ಯೆಯಿಂದ ಶಾಲೆಗೆ ಹೋಗದ ಮಕ್ಕಳನ್ನು ದಾಖಲಿಸಲು ಅನುಷ್ಠಾಧಿಕಾರಿಗಳು ತಮ್ಮ ಕ್ಷೇತ್ರಮಟ್ಟದಲ್ಲಿ ವ್ಯಾಪಕ ಮಾಹಿತಿ ನೀಡಬೇಕು. ಅರ್ಹ ಹೆಣ್ಣುಮಕ್ಕಳು ಮೇ 26 ರಿಂದ ಜೂನ್ 1ರೊಳಗೆ ಆನ್ ಲೈನ್ ಮೂಲಕ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಮೊ;9449142409 ಸಂಪರ್ಕಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಮಾತನಾಡಿ, ಕೆಜಿಬಿವಿ ಶಾಲೆಯಲ್ಲಿ ಸರಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕರಾದ ಎಂ.ಸಿ. ನಾಲತವಾಡ, ವೈ.ಬಿ.ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಾವೇದ ಶೇಖ, ಎಸ್.ಎಸ್. ಯಲಿಗಾರ ಸೇರಿದಂತೆ ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೧೨ ಪೆಟ್ರೋಲ್‌ ಬಂಕ್‌ ಇದ್ರೂ ಡೇಸೆಲ್‌ಗೆ ಪರದಾಟ
ಮಹಿಷವಾಡಗಿ ಸೇತುವೆ ಕಾಮಗಾರಿಗೆ ಭಗೀರಥ ಯತ್ನ