ಶಿಕ್ಷಕರ ಸಂಘದ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿದ ಬಿಇಒ ಕೃಷ್ಣೇಗೌಡ

KannadaprabhaNewsNetwork |  
Published : Jul 22, 2026, 02:00 AM IST
20ಎಚ್ಎಸ್ಎನ್10 | Kannada Prabha

ಸಾರಾಂಶ

ಶಿಕ್ಷಕರ ಮತ್ತು ಮಕ್ಕಳ ಆನ್ಲೈನ್ ಹಾಜರಾತಿ ಕುಂದು ಕೊರತೆಗಳ ಬಗ್ಗೆ, ಗುರು ಸ್ಪಂದನದ ಬಗ್ಗೆ, ಜ್ಯೋತಿಯ ಸಂಜೀವಿನಿ ಬಗ್ಗೆ ಹಾಗೂ ಮೊಟ್ಟೆ ಮತ್ತು ಅಡುಗೆ ಎಣ್ಣೆ ದರಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಚರ್ಚಿಸಲಾಯಿತು.

ಆಲೂರು; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹಾಗೂ ಆಲೂರು ತಾಲೂಕು, ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಣ ಇಲಾಖೆಯ ವಿವಿಧ ಬೇಡಿಕೆಗಳ ಈಡೇರಿಸುವ ಸಲುವಾಗಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ವೃಂದಗಳ ಪದಾಧಿಕಾರಿಗಳು ಸಲ್ಲಿಸಿದ ಮನವಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಶಿಕ್ಷಕರ ಮತ್ತು ಮಕ್ಕಳ ಆನ್ಲೈನ್ ಹಾಜರಾತಿ ಕುಂದು ಕೊರತೆಗಳ ಬಗ್ಗೆ, ಗುರು ಸ್ಪಂದನದ ಬಗ್ಗೆ, ಜ್ಯೋತಿಯ ಸಂಜೀವಿನಿ ಬಗ್ಗೆ ಹಾಗೂ ಮೊಟ್ಟೆ ಮತ್ತು ಅಡುಗೆ ಎಣ್ಣೆ ದರಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಎಂ. ವರದರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಆರ್‌. ಶ್ರೀನಿವಾಸ್, ನೌಕರರ ಸಂಘದ ಗೌರವಾಧ್ಯಕ್ಷ ಬಿ. ಆರ್. ಧರ್ಮ, ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ವಿ. ರವಿತ, ಎಂ. ಆರ್‌. ವೇಣುಗೋಪಾಲ್, ಕಾರ್ಯದರ್ಶಿ ಎಸ್. ಪ್ರವೀಣ್ ಕುಮಾರ್, ಖಜಾಂಚಿ ಎಚ್. ಡಿ. ಸೋಮೇಶ್ ಸೇರಿ ತಾಲೂಕಿನ ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರು, ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯ 58 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಸಾಧ್ಯತೆ
ಕುಡಿವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಪ್ರತಿಭಟನೆ