ಉತ್ತಮ ಕ್ರಿಕೆಟ್ ತರಬೇತಿ ನಗರದಲ್ಲೇ ಲಭ್ಯ: ದಿನೇಶ ಶೆಟ್ಟಿ

KannadaprabhaNewsNetwork | Published : Apr 4, 2024 1:00 AM

ಸಾರಾಂಶ

ಉತ್ತಮ ಕ್ರಿಕೆಟ್ ತರಬೇತಿಗೆ ದಾವಣಗೆರೆ ಕ್ರೀಡಾಪಟುಗಳು ಈ ಹಿಂದೆ ಬೆಂಗಳೂರು ಅಥವಾ ಮೈಸೂರನ್ನು ಅರಸಿ ಹೋಗಿ, ಹೆಚ್ಚು ಹಣ ವೆಚ್ಚ ಮಾಡುವ ಅವಶ್ಯಕತೆ ಇತ್ತು. ಈಗ ಆ ಸಮಸ್ಯೆ ಇಲ್ಲದಂತಾಗಿದೆ. ನಮ್ಮಲ್ಲಿಯೇ ಅತ್ಯುತ್ತಮ ಕ್ರಿಕೆಟ್ ತರಬೇತಿಯನ್ನು ದಾವಣಗೆರೆ ಕ್ರಿಕೆಟ್ ಅಕಾಡೆಮಿ 23 ವರ್ಷಗಳಿಂದ ನೀಡುತ್ತಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಉತ್ತಮ ಕ್ರಿಕೆಟ್ ತರಬೇತಿಗೆ ದಾವಣಗೆರೆ ಕ್ರೀಡಾಪಟುಗಳು ಈ ಹಿಂದೆ ಬೆಂಗಳೂರು ಅಥವಾ ಮೈಸೂರನ್ನು ಅರಸಿ ಹೋಗಿ, ಹೆಚ್ಚು ಹಣ ವೆಚ್ಚ ಮಾಡುವ ಅವಶ್ಯಕತೆ ಇತ್ತು. ಈಗ ಆ ಸಮಸ್ಯೆ ಇಲ್ಲದಂತಾಗಿದೆ. ನಮ್ಮಲ್ಲಿಯೇ ಅತ್ಯುತ್ತಮ ಕ್ರಿಕೆಟ್ ತರಬೇತಿಯನ್ನು ದಾವಣಗೆರೆ ಕ್ರಿಕೆಟ್ ಅಕಾಡೆಮಿ 23 ವರ್ಷಗಳಿಂದ ನೀಡುತ್ತಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಿಂದ ಮಂಗಳವಾರದಿಂದ ನಡೆದ 23ನೇ ವರ್ಷದ ಕ್ರಿಕೆಟ್ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ನುರಿತ ಬಿಸಿಸಿಐ ಹಾಗೂ ಕೆಎಸ್‌ಸಿಎ ಮಾನ್ಯತೆ ಪಡೆದಿರುವ ಕೋಚ್‌ಗಳಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ತರಬೇತಿ ವೆಚ್ಚದ ಜೊತೆಗೆ ವಸತಿ, ಊಟದ ಹಾಗೂ ತರಬೇತಿ ವೆಚ್ಚವನ್ನು ಭರಿಸಲಾಗದೇ ಎಷ್ಟೋ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದರು. ಈಗ ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ತರಬೇತಿ ದೊರೆಯಲಿದ್ದು, ದಾವಣಗೆರೆ ಕ್ರೀಡಾಪಟುಗಳು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಸಿರಿಗೆರೆಯ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀರಾಮ ಪ್ರಭು ಮಾತನಾಡಿ, ಏನನ್ನಾದರೂ ಕಲಿಯಬೇಕು ಎಂದರೆ ಮೊದಲು ಆಸಕ್ತಿ ಇರಬೇಕು. ಆನಂತರ ದೇಹವನ್ನು ದಂಡಿಸಲು ತಯಾರಿರಬೇಕು. ಆಗ ಒಬ್ಬ ಕ್ರೀಡಾಪಟು ಅತ್ಯುತ್ತಮ ಕ್ರೀಡಾಪಟು ಆಗಲು ಸಾಧ್ಯ. ನೀವೆಲ್ಲ ಉತ್ತಮ ರೀತಿಯಲ್ಲಿ ಕ್ರಿಕೆಟ್ ಕಲಿತು ಅಂತರ ರಾಷ್ಟ್ರೀಯಮಟ್ಟದಲ್ಲಿ ಬೆಳೆದು ಕೀರ್ತಿ ತರಬೇಕು ಎಂದು ಹಾರೈಸಿದರು.

ಏ.2ರಿಂದ ಮೇ 31ರವರೆಗೆ ಕ್ರಿಕೆಟ್ ತರಬೇತಿ ನೀಡಲಿದ್ದು, ಆಸಕ್ತರು ಗೋಪಾಲಕೃಷ್ಣ (ಮೊಃ 7899610318) ಅಂಬರ್‌ಕರ್ (99645 99160), ತಿಮ್ಮೇಶ್ (98804 40602) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಯಿತು.

ಈ ಸಂದರ್ಭ ಶಾಮನೂರು ತಿಪ್ಪೇಶ್, ರವಿ, ಮಂಜುನಾಥ, ವಸಂತ್, ಕಾರ್ಪೊರೇಟರ್ ಉದಯ್, ಕೋಚ್‌ಗಳಾದ ಗೋಪಾಲಕೃಷ್ಣ, ತಿಮ್ಮೇಶ್, ಕುಮಾರ್, ಉಮೇಶ್ ಸಿರಿಗೆರೆ, ವೆಂಕಟೇಶ್, ಮನೋಜ್ ಕುಮಾರ್ ಇತರರು ಇದ್ದರು.

- - - -2ಕೆಡಿವಿಜಿ32ಃ:

ದಾವಣಗೆರೆಯಲ್ಲಿ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.

Share this article