ಕನ್ನಡಪ್ರಭ ವಾರ್ತೆ ಮಧುಗಿರಿ
2023-24ನೇ ಸಾಲಿಗೆ ಕಳೆದ ಮಾರ್ಚಿನಲ್ಲಿ ನಡೆದ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಕ್ರಮವಾಗಿ ಪಟ್ಟಣದ ಜ್ಞಾನಪ್ರಿಯ, ಸರ್ಕಾರಿ, ರಾಘವೇಂದ್ರ ಹಾಗೂ ಕಾರ್ಡಿಯಲ್ ಪಪೂ ಕಾಲೇಜುಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಜ್ಞಾನಪ್ರಿಯ ಪಪೂ ಕಾಲೇಜಿನ ಫಲಿತಾಂಶದ ವಿವರ:
ವಿಜ್ಞಾನ ವಿಭಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಾದ ಅಬುಸಲ್ಮಾನ್ 565 ಅಕಗಳಿಸಿ ಶೇ. 94.17.ಶಾಜೀಯ 551,ಶೇ.91.83 ,ಉತ್ತಮ ಅಂಕ ಪಡೆದಿದ್ದಾರೆ. ಈ ಕಾಲೇಜನಲ್ಲಿ 41 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,5 ಮಂದಿ ಪ್ರಥಮ,28 ವಿದ್ಯಾರ್ಥಿಗಳು ದ್ವಿತೀಯ, 4 ತೃತೀಯ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ.ಸರ್ಕಾರಿ ಪಪೂ ಕಾಲೇಜಿನಲ್ಲಿ ಒಟ್ಟು 184 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಈ ಪೈಕಿ 142 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, 72 ಮಂದಿ ಪ್ರಥಮ,29 ದ್ವಿತೀಯ,11 ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದು ಶೇ.77.17 ಫಲಿತಾಂಶ ಲಭಿಸಿದೆ.
ಕಲಾ ವಿಭಾಗದಲ್ಲಿ ಚಿದಾನಂದ 560, ವಾಣಿಜ್ಯ ವಿಭಾಗದಲ್ಲಿ ಕೆ.ಎ. ಶ್ವೇತಾ 570,ಹರ್ಷಿತಾ 570,ಕವಿತಾ 553,ಕಲ್ಪನಾ 566,ಚೈತನ್ಯವರ್ಷ 541,ಕೆ.ಜೆ. ದೀಕ್ಷಾ 562,ಲಕ್ಷ್ಮೀ 566 ಅಕಗಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಜಿ.ಎನ್.ಸರಿತಾ 550,ಎಸ್.ಮಾನಸ.513,ವಿನೂಪಿಗೌಡ 507, ಅತ್ಯಧಿಕ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಾಘವೇಂದ್ರ ಪದವಿ ಪೂರ್ವ ಕಾಲೇಜಿನ ಫಲಿತಾಂಶದ ವಿವರ:ಒಟ್ಟು ಪರೀಕ್ಷೆ ಬರೆದವರು 223 ಮಂದಿ. ಈ ಪೈಕಿ 209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು,ಶೇ.94 ರಷ್ಟು ಉತ್ತಮ ಫಲಿತಾಂಶ ಲಬಿಸಿದೆ.
ಈ ಪೈಕಿ 43 ಅತ್ಯುತ್ತಮ ಶ್ರೇಣಿ, 122 ಪ್ರಥಮ,26 ದ್ವಿತೀಯ. 18 ತೃತೀಯ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ: ಸಹನಾ 578, ಇಬಿಎಸಿಎಸ್ ವಿಭಾಗದಲ್ಲಿ ಕಿರಣ್ ಎಸ್. 578 ಅಂಕಗಳಿಸಿದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.ಕಾರ್ಡಿಯಲ್ಲಿ ಪಪೂ ಕಾಲೇಜಿನ ಫಲಿತಾಂಶದ ವಿವರ:
ವಿಜ್ಞಾನ ವಿಭಾಗದಲ್ಲಿಃ ಜಿ.ಆರ್.ಪ್ರಶಾಂತ್ 587,ಅಂಕಗಳಿಸಿ ಶೇ.97.83 ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 12ನೇ ರ್ಯಾಂಕ್ ಪಡೆದಿದ್ದಾರೆ.ಎಸ್.ದಿವ್ಯಾ ಮತ್ತು ರುಹೀನಾ ತಲಾ 585 ಅಂಕಗಳಿಸಿ ಶೇ.97 .50 ರಾಜ್ಯ ಮಟ್ಟದಲ್ಲಿ 14ನೇ ರ್ಯಾಂಕ್ ಪಡೆದಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗಳಿಸಿದ್ದಾರೆ.ವಿಜ್ಞಾನ ವಿಭಾಗದ ಒಟ್ಟು ವಿದ್ಯಾರ್ಥಿಗಳು 109 ಮಂದಿ ಡಿಸ್ಟಿಂಕ್ಷನ್,50 ಪ್ರಥಮ,55 ದ್ವಿತೀಯ,ಇಬ್ಬರು ವಾಣಿಜ್ಯ ವಿಭಾಗದಲ್ಲಿ ಪೂಜಾ.ಎಚ್.ಆರ್.577 ಅಂಕಗಳಿಸಿ ಶೇ.96.17 ಪಡೆದಿದ್ದಾರೆ..ಒಟ್ಟು ವಿದ್ಯಾರ್ಥಿಗಳ ಪೈಕಿ 21 ಡಿಸ್ಟಿಂಕ್ಷನ್,6 ಪ್ರಥಮ,12 ದ್ವಿತೀಯ,ಇ್ಬಬರು ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕಾಲೇಜಿನ ಪ್ರಾಂಶುಪಾಲರು ಮತ್ತು ಎಲ್ಲ ವಿಷಯದ ಉಪನ್ಯಾಸಕರುಗಳು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.